ದೆಹಲಿ ಸಾಮೂಹಿಕ ಪ್ರಾರ್ಥನೆ ಮುಗಿಸಿ ಬಂದವರ ಮೇಲೆ ವಿಶೇಷ ನಿಗಾಕ್ಕೆ ಸಚಿವ ಸಿ.ಸಿ ಪಾಟೀಲ ಸೂಚನೆ.

ದೆಹಲಿ ಸಾಮೂಹಿಕ ಪ್ರಾರ್ಥನೆ ಮುಗಿಸಿ ಬಂದವರ ಮೇಲೆ ವಿಶೇಷ ನಿಗಾಕ್ಕೆ ಸಚಿವ ಸಿ.ಸಿ ಪಾಟೀಲ ಸೂಚನೆ.

ವಿಜಯಪುರಏ.03

ದೆಹಲಿ ಮರ್ಕಜ್ ಸಾಮೂಹಿಕ ಪ್ರಾರ್ಥನೆ ಮುಗಿಸಿ ವಿಜಯಪುರಕ್ಕೆ ಬಂದಿರುವ 19 ಜನರ ಮೇಲೆ ಪ್ರತ್ಯೇಕ ನಿಗಾ ಹಾಗೂ ಕಾಳಿಜಿವಹಿಸುವಂತೆ ಜಿಲ್ಲಾ ಉಸ್ತ್ತುವಾರಿ ಸಚಿವ ಸಿ.ಸಿ ಪಾಟೀಲ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಡಿಯೊ ಸಂವಾದ ಮೂಲಕ ತಿಳಿಸಿದ್ದಾರೆ.  

ಇಂದು ವಿಡಿಯೋ ಸಂವಾದ ನಡೆಸಿದ ಅವರು ದೆಹಲಿ ಮರ್ಕಜ್ ಸಾಮೂಹಿಕ ಪ್ರಾರ್ಥನೆಗೆ ಹೋಗಿ ವಿಜಯಪುರಕ್ಕೆ ಮರಳಿರುವವರನ್ನು ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಿ ವಿಶೇಷವಾಗಿ ಹಾಗೂ ಪ್ರತ್ಯೇಕವಾಗಿ ನಿಗಾ ಇಡಬೇಕು, ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಕಳುಹಿಸುವುದರ ಜೊತೆಗೆ ವರದಿ ಬಂದ ಕೂಡಲೇ ಗಮನಕ್ಕೆ ತರುವಂತೆ ಅವರು ತಿಳಿಸಿದ್ದಾರೆ.

ಕೋವಿಡ್-19 ಬಾಧಿತ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದಿರುವ ಜನರನ್ನು ಹೋಮ್‍ಕ್ವಾರಂಟೈನ್‍ನಲ್ಲಿಟ್ಟು ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ತೀವ್ರ ನಿಗಾ ವಹಿಸಬೇಕು. ಮಲೇಷಿಯಾ ಹಾಗೂ ಇಂಡೊನೆಷಿಯಾ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ನಾಲ್ವರ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದಾಗಿ ಜಿಲ್ಲಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಜಿಲ್ಲೆಗೆ ಅವಶ್ಯಕ ಉಪಕರಣಗಳು ಹಾಗೂ ಅವಶ್ಯಕ ವಸ್ತುಗಳಿಗೆ ಯಾವುದೇ ತೊಂದರೆಗಳಾಗದಂತೆ ಮುನ್ನೆಚ್ಚರಿಕೆವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಹಾಗೂ ಇನ್ನಿತರ ಸಾಮಗ್ರಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪರ್ಸನಲ್ ಪ್ರೋಟೆಕ್ಷನ್ ಇಕ್ಯುಪ್‍ಮೆಂಟ್‍ಗಳನ್ನು ಹೆಚ್ಚಿನ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಕೊರತೆಗೆ ಸಂಬಂಧ ಪಟ್ಟಂತೆ ತಕ್ಷಣ ಸ್ಪಂದಿಸಿ ಪಿಪಿಇ ಕಿಟ್ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

Previous ವಿದ್ಯುತ್ ಗ್ರಾಹಕರಿಗೆ ಬಿಲ್ ಪಾವತಿಸುವಂತೆ ಇಂಧನ ಇಲಾಖೆ ಮನವಿ.
Next ಗದಗ ನಗರದಲ್ಲಿ ಉಚಿತ ಹಾಲು ವಿತರಣ.

You might also like

0 Comments

No Comments Yet!

You can be first to comment this post!

Leave a Reply