ಜಿಲ್ಲೆಗೆ ಈವರೆಗೆ 370 ಜನ ವಿದೇಶದಿಂದ ಬಂದ ಬಗ್ಗೆ ವರದಿ -27 ಜನರ ಪರೀಕ್ಷಾ ವರದಿ ನೆಗೆಟಿವ್.

ಜಿಲ್ಲೆಗೆ ಈವರೆಗೆ 370 ಜನ ವಿದೇಶದಿಂದ ಬಂದ ಬಗ್ಗೆ ವರದಿ -27 ಜನರ ಪರೀಕ್ಷಾ ವರದಿ ನೆಗೆಟಿವ್.

ವಿಜಯಪುರ ಎ.03

 ಜಿಲ್ಲೆಗೆ ಇಂದು ಈವರೆಗೂ ಒಟ್ಟು 370 ಜನರು ವಿದೇಶದಿಂದ ಬಂದ ಬಗ್ಗೆ ವರದಿಯಾಗಿದ್ದು, ಈ ವರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದ 50 ಜನರ ಗಂಟಲು ದ್ರವ ಮಾದರಿ ಪೈಕಿ 27 ಜನರ ವರದಿ ನೆಗಟಿವ್ ಬಂದಿದ್ದು ಇಂದು ಸಂಜೆವರೆಗೆ ಉಳಿದವರ ಪರೀಕ್ಷಾ ವರದಿ ಬರಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಅಧಿಕಾರಿಗಳೊಂದಿಗೆ ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಭೆ ನಡೆಸಿದ ಅವರು ಈ 370 ಜನರಲ್ಲಿ 93 ಜನರು 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 244 ಜನರು 15-28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದು, 33 ಜನ ಹೋಮ್‍ಕ್ವಾರಂಟೈನ್‍ದಲ್ಲಿದ್ದಾರೆ. 23 ಜನರು ಆಸ್ಪತ್ರೆ ನಿಗಾದಲ್ಲಿದ್ದಾರೆ ಎಂದು ಇಂದು ಅವರು ತಿಳಿಸಿದ್ದಾರೆ.

  ಪಶ್ಚಿಮ ಬಂಗಾಳದಿಂದ ದೆಹಲಿಗೆ ತೆರಳಿದ್ದ 10 ಜನರ ಮತ್ತು ಇಂಡೊನೇಷಿಯಾ ಹಾಗೂ ಮಲೇಷಿಯಾದ ನಾಗರಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ವಿಜಯಪುರದ ನಾಲ್ವರ ಗಂಟಲು ದ್ರವ ಮಾದರಿ ವರದಿ ನೆಗೆಟಿವ್ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಕೋವಿಡ್-19 ನಿಯಂತ್ರಣಕ್ಕಾಗಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಕೊರೋನಾ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುವ ಹಾಗೂ ಅನುಮತಿ ಇಲ್ಲದೆ ಕೊರೋನಾ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಬ್ಬಿಸುವವರ ಕ್ರಿಮಿನಲ್ ಮೊಕದ್ದಮೆ ಸಹ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಇತರೆ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ದೂರುಗಳ ಬಗ್ಗೆ ಕಾಯದೆ ಸಕ್ಷಮ ಪ್ರಾಧಿಕಾರಿಗಳಿಂದ ಅನುಮತಿ ಹೊಂದದೆ ಸುಳ್ಳು ಸುದ್ದಿ ಬಿತ್ತರಿಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Previous ಪೊಲೀಸ್ರ ಕಾರ್ಯಕ್ಕೆ ಮೆಚ್ಚುಗೆ, ವೈರಲ್ ಆದ ಪೋಟೋ.
Next ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಪಡುವಂತಿಲ್ಲ: ಪ್ರಜ್ವಲ್ ರೇವಣ್ಣ.

You might also like

0 Comments

No Comments Yet!

You can be first to comment this post!

Leave a Reply