ಜನರಿಗೆ ಪಡಿತರ ಹಂಚಿದ ಶಾಸಕ.

ಜನರಿಗೆ ಪಡಿತರ ಹಂಚಿದ ಶಾಸಕ.

ಬಳ್ಳಾರಿ – ಏ-4

ಕೊರೋನಾ ವೈಸರ್ ನಿಂದ ದೇಶ ಸಂಪೂರ್ಣ ಲಾಕ್ ಡೌನ್ ಆಗಿ ಈಗಾಗಲೇ 11 ದಿನಗಳು ಕಳೆದಿವೆ. ಬಡವರಿ ಜನ ಸರಿಯಾದ ಆಹಾರ ಸಿಗದೆ ಕಂಗಾಲಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಎರಡು ತಿಂಗಳ ಪಡಿತರವನ್ನು ಒಂದೇ ಸಾರಿ ಕೊಡಲು ತೀರ್ಮಾಣ ಮಾಡಿದ್ದು , ಕಳೆದ ಎರಡು ದಿನಗಳಿಂದ ಬಳ್ಳಾರಿಯಲ್ಲಿ ಇರುವ ಎಲ್ಲ ಪಡಿತರ ಮಳಿಗೆಯಲ್ಲಿ ಎರಡು ತಿಂಗಳ ಪಡಿತರವನ್ನು ನೀಡಲು ಮುಂದಾಗಿದ್ದು . ಜನ ನ್ಯಾಯ ಬೆಲೆ ಅಂಗಡಿಲ್ಲಿ ಪಡಿತರವನ್ನು ಪಡೆಯುತಿದ್ದಾರೆ. ಇನ್ನು ಬಳ್ಳಾರಿಯ ಗ್ರಾಮೀಣ ಶಾಸಕ ನಾಗೇಂದ್ರ ಅವರು ಒಂದು ಹೆಜ್ಜೆ ಮುಂದಿಟ್ಟಿದ್ದು ತಾವೇ ಸ್ವತಃ ಪಡಿತರ ಅಂಗಡಿಯಲ್ಲಿ ನಿಂತು ಜನರಿಗೆ ಪಡಿತರವನ್ನು ಹಂಚಿದ್ದಾರೆ. ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಜನರಲ್ಲಿ ತಿಳಿ ಹೇಳಿ ತಾವೇ ಪಡಿತರವನ್ನು ಹಂಚಿದ್ದಾರೆ. ಗುಂಪು ಗುಂಪಾಗಿ ಬಂದ ಜನರನ್ನು ಸರತಿ ಸಾಲಿನಲ್ಲಿ ಬರುವಂತೆ ಹೇಳಿ ಸಾಮಾಜಿಕ ಅಂತರ ಕಾಯ್ದುಕೊಂಡವರಿಗೆ ಮಾತ್ರ ಪಡಿತರವನ್ನು ನೀಡಿದ್ದಾರೆ.     

Previous ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಪಡುವಂತಿಲ್ಲ: ಪ್ರಜ್ವಲ್ ರೇವಣ್ಣ.
Next ಆಹಾರ ಪದಾರ್ಥಗಳನ್ನು ಸದುಪಯೋಗಪಡಿಸಿಕೊಳ್ಳಿ: ಜನರಿಗೆ ಪಡಿತರ ಹಂಚಿದ ಸಚಿವ ಸಚಿವ ಸಿ.ಟಿ ರವಿ.

You might also like

0 Comments

No Comments Yet!

You can be first to comment this post!

Leave a Reply