ನಿಗದಿತ ದರದಲ್ಲಿ ಚಿಕನ್ ಮತ್ತು ಮಟನ್ ಮಾರಾಟ.

ನಿಗದಿತ ದರದಲ್ಲಿ ಚಿಕನ್ ಮತ್ತು ಮಟನ್ ಮಾರಾಟ.

ಹುಬ್ಬಳ್ಳಿ ಏ.06:

 ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ನಿಗದಿತ ದರದಲ್ಲಿ ಚಿಕನ್ ಮತ್ತು ಮಟನ್ ಮಾರಾಟ ಮಾಡಬೇಕು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ಹೇಳಿದ್ದಾರೆ.

ಹುಬ್ಬಳ್ಳಿಯ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಈ ಕುರಿತು ಆಯೋಜಿಸಲಾದ ಮಾಂಸ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಲಾಕ್ ಡೌನ್ ಪೂರ್ವದಲ್ಲಿನ ದರದಲ್ಲೇ ಮಾಂಸ ಮಾರಾಟ ಮಾಡಬೇಕು. ಯಾರು ಮನಬಂದಂತೆ ದರ ನಿಗದಿ ಮಾಡಬಾರದು. ಮಟನ್ ಒಂದು ಕೆ.ಜಿ.ಗೆ 600 ಹಾಗೂ ಚಿಕನ್ ಒಂದು ಕೆ.ಜಿ.ಗೆ 160 ರಿಂದ 180 ರೂಪಾಯಿಯಂತೆ ಮಾರಾಟ ಮಾಡಬೇಕು. ಪ್ರತಿ ಅಂಗಡಿಯ ಮುಂದೆ ದರಪಟ್ಟಿಯನ್ನು ಹಾಕಬೇಕು. ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವ್ಯವಹಾರ ನೆಡಸಬೇಕು ಎಂದು ಹೇಳಿದರು.

 ಸರ್ಕಾರ ಚಿಕನ್, ಮಟನ್ ಹಾಗೂ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಕೊರೋನಾ ವೈರಸ್‍ಗೂ ಮಾಂಸ ಸೇವನೆಗೂ ಯಾವುದೇ ಸಂಬಂದವಿಲ್ಲ. ಮಾಂಸ ಮಾರಾಟಗಾರರು ಸ್ವಚ್ಛತೆ ಕಾಪಾಡಿಕೊಂಡು ವ್ಯವಹಾರ ನೆಡಸಬೇಕು. ಪಾಲಿಕೆಯಿಂದ ಮಾಂಸದ ಅಂಗಡಿಗಳ ಕಸ ಸಂಗ್ರಹಕ್ಕಾಗಿ ವಿಷೇಶ ಕಸ ಸಂಗ್ರಹ ಟಿಪ್ಪರ್‍ಗಳನ್ನು ಕಳುಹಿಸಿಕೊಡಲಾಗುವುದು.

ಪಾಲಿಕೆಯಿಂದ ಜಾಗೃತಿದಳವನ್ನು ನೇಮಿಸಿ ಅಂಗಡಿಗಳಲ್ಲಿ ದರ ನಿಗದಿ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿದ್ದಾರೆ ಎಂದು ಪರಿಶೀಲನೆ ನೆಡೆಸಲಾಗುವುದು. ಯಾವುದೇ ವ್ಯಾಪಾರಸ್ಥರು ನಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ನಾಗರಿಕರು ಪಾಲಿಕೆ ದೂರು ಸಲ್ಲಿಸಬಹುದು ಎಂದಿದ್ದಾರೆ…

Previous ಕೃಷಿ ಚಟುವಟಿಕೆ; ಬೀಜ-ಗೊಬ್ಬರ ಮಾರಾಟ, ಸಾಗಾಣಿಕೆಗೆ ನಿರ್ಬಂಧವಿಲ್ಲ.
Next ಅಮಾವಶ್ಯಕವಾಗಿ ತಿರುಗಾಡುವವರ ಮೇಲೆ ಕ್ರಮ.

You might also like

0 Comments

No Comments Yet!

You can be first to comment this post!

Leave a Reply