500 ಬಡ ಕುಟುಂಬಗಳ ನೆರವಿಗೆ ಮುಂದಾದ ಸ್ಯಾಂಡಲ್ವುಡ್ ನಟಿ..!

ಬೆಂಗಳೂರು –

ಕೊರೋನಾ ಹಾವಳಿಯಿಂದ ಪ್ರತಿಯೊಂದು ಕ್ಷೇತ್ರವೂ ತಲ್ಲನಗೊಂಡಿದೆ,  ಇದಕ್ಕೆ ಕನ್ನಡ ಚಿತ್ರರಂಗ ಕೂಡಾ ಹೊರತಾಗಿಲ್ಲಾ ಇಡೀ ಜಗತ್ತನ್ನು ನಲುಗಿಸಿದ. ಈ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್​ಡೌನ್ ಘೋಷಿಸಲಾಗಿದೆ. ಒಂದೆಡೆ ಕೊರೋನಾ ಭೀತಿ, ಮತ್ತೊಂದೆಡೆ ಆರ್ಥಿಕ ಸಮಸ್ಯೆಯಿಂದ ಬಡ ಕಾರ್ಮಿಕರು, ದಿನಗೂಲಿ ನೌಕರು ಒಂದೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ.

ಕೇವಲ ದೊಡ್ಡ ದೊಡ್ಡ ಉಧ್ಯಮಿಗಳು ಮಾತ್ರ ಬಡವರ ಸಹಾಯಕ್ಕೆ ಮುಂದೆ ಬಂದಿಲ್ಲಾ ಬದಲಾಗಿ ಕನ್ನಡ ಚಿತ್ರರಂಗದ ನಟ ನಟಿಯರೂ ಸಹ,ಬಡ ಕಾರ್ಮಿಕರ ಸಹಾಯಕ್ಕೆ ಮುಂದೆ ಬಂದಿದ್ದಾರೆ. ಈಗಾಗಲೇ ಮೈಸೂರು ಭಾಗದಲ್ಲಿ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಕಳೆದೆರಡು ದಿನಗಳಿಂದ ಅನ್ನದಾನದ ಮೂಲಕ ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗೆಯೇ ಕಿಚ್ಚ ಸುದೀಪ್ ಅಭಿಮಾನಿಗಳು ಕೂಡ ಸುದೀಪ್​ ಚಾರಿಟೇಬಲ್​ ಮೂಲಕ ಈ ಬೆಂಗಳೂರಿನ ಗೋರಿಪಾಳ್ಯ, ಮೈಸೂರು ರಸ್ತೆ, ಜೆ.ಪಿ ನಗರ, ಬ್ಯಾಟರಾಯನ ಪುರ, ಬಂಗಾರಪ್ಪ ನಗರದಲ್ಲಿ ಬಡವರ ನೆರವಿಗೆ ನಿಂತು ಅವರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

ಇನ್ನು ಚಿತ್ರರಂಗದ ಯುವರಾಜ ಎಂದೇ ಖ್ಯಾತಿ ಪಡೆದಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಕೂಡ ಸಹಾಯಕ್ಕೆ ಧಾವಿಸಿದ್ದು, 3ಸಾವಿರಕ್ಕೂ ಹೆಚ್ಚಿನ ಸ್ಯಾಂಡಲ್​ವುಡ್​ ದಿನಗೂಲಿ ಕಾರ್ಮಿಕರ ಬ್ಯಾಂಕ್​ ಖಾತೆಗೆ ನೇರವಾಗಿ ಹಣ ಹಾಕಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದೀಗ ಸ್ಯಾಂಡಲ್​ವುಡ್ ನಟಿ ಪ್ರಣಿತಾ ಸುಭಾಷ್ ಕೂಡ ಸಹಾಯ ಹಸ್ತ ಚಾಚಿದ್ದು, ಪ್ರಣಿತಾ ಫೌಂಡೇಶನ್ ಮೂಲಕ 500 ಕುಟುಂಬಗಳಿಗೆ ನಟಿ ಪ್ರಣಿತಾ ನೆರವು ನೀಡಲು ಮುಂದಾಗಿದ್ದಾರೆ. ಒಂದು ಕುಟುಂಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ತಿಂಗಳಿಗೆ ಎರಡು ಸಾವಿರ ರೂಪಾಯಿ ಬೇಕಾಗುತ್ತದೆ. ಇಂತಹ 50 ದಿನಗೂಲಿ ನೌಕರರ, ಕಾರ್ಮಿಕರಿಗೆ, ಆಟೋ ಡ್ರೈವರ್​ಗಳ ಕುಟುಂಬಗಳಿಗೆ ದವಸ, ಧಾನ್ಯ ಹಾಗೂ ಔಷಧಿಗಳನ್ನು ಒದಗಿಸಲು ಸ್ಯಾಂಡಲ್​ವುಡ್ ನಟಿ ನಿರ್ಧರಿಸಿದ್ದಾರೆ. ಹಾಗೆಯೇ ಪ್ರಣಿತಾ ಫೌಂಡೇಶನ್ ಮೂಲಕ 500 ಕುಟುಂಬಗಳಿಗೆ ನೆರವು ನೀಡಲು ಇಚ್ಛಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದ್ದು, ಸಾಧ್ಯವಾದಷ್ಟು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

Previous ಕೊರೋನಾ ಭೀತಿ: ನಿಖಿಲ್-ರೇವತಿ ಮದ್ವೆ ಪ್ಲಾನ್ ದಿಢೀರ್ ಚೇಂಜ್..!
Next ಕನ್ನಡ ಸಿನೆಮಾ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಆರ್ಥಿಕ ನೆರವು ನೀಡುತ್ತಾರೆ..

You might also like

0 Comments

No Comments Yet!

You can be first to comment this post!

Leave a Reply