ಕೊರೋನಾ ಸೋಂಕಿನಿಂದ ರಾಜ್ಯಸಭಾ ಸಂಸದ ಅಶೋಕ್​ ಗಸ್ತಿ ನಿಧನ

ಕೊರೋನಾ ಸೋಂಕಿನಿಂದ ರಾಜ್ಯಸಭಾ ಸಂಸದ ಅಶೋಕ್​ ಗಸ್ತಿ ನಿಧನ

ಬೆಂಗಳೂರು-

ಕಳೆದ ಕೆಲವೇ ದಿನಗಳ ಹಿಂದೆ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆ ಆಗಿದ್ದ ಬಿಜೆಪಿಯ ಅಶೋಕ್ ಗಸ್ತಿ ಅವರು ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸೋಂಕಿಗೆ ಗುರಿಯಾಗಿದ್ದ ಅವರು, ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಅವರು ಸಾವನ್ನಪ್ಪಿದ್ದಾರೆ.

ರಾಯಚೂರಿನ ಲಿಂಗಸಗೂರಿನ ಅವರು ಸವಿತಾ ಸಮಾಜಕ್ಕೆ ಸೇರಿದವರಾಗಿದ್ದು , ಕಾಲೇಜಿನಲ್ಲಿದ್ದಾಗಲೇ ಹೋರಾಟವನ್ನು ಮೈಗೂಡಿಸಿಕೊಂಡ ಇವರು ತಮ್ಮ ಹೋರಾಟದ ಹಾದಿಗೆ ಧುಮಿಕಿದ್ದರು. 1990ರಿಂದ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿದ್ದರು. ಬಳ್ಳಾರಿ ಹಾಗು ರಾಯಚೂರು ಪಕ್ಷದ ಸಂಘಟನಾ ಮುಖಂಡರಾಗಿ ಕೆಲಸ ಮಾಡುತ್ತಿದ್ದಾರೆ. 2001ರಲ್ಲಿ ರಾಯಚೂರು ನಗರಸಭೆಯ ಸದಸ್ಯರಾಗಿ ಆಯ್ಕೆಯಾದರು. 2012ರಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ‌ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸಹ ಕೆಲಸ ಮಾಡಿದ್ದಾರೆ. ಬಿಜೆಪಿ ಯುವ ಮೋರ್ಚ, ವಕೀಲರ ಘಟಕ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಅಚ್ಚರಿ ಎಂಬಂತೆ ಬಿಜೆಪಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ…

Previous ಕೃಷಿ ಕಾಲೇಜು ಮೇಲ್ದರ್ಜೇಗೆ ಶೀಘ್ರ ಕ್ರಮ - ಸಚಿವ ಆನದಸಿಂಗ್
Next ಜನನ ಮರಣ ಪ್ರಮಾಣ ಪತ್ರಗಳಿಗೆ ಡಿಜಿಟಲ್ ಸಹಿ ಕಡ್ಡಾಯ

You might also like

0 Comments

No Comments Yet!

You can be first to comment this post!

Leave a Reply