ಕೋರ್ಟ್ ಮೊರೆ ಹೋದ ರಾಗಿಣಿ..!

ಕೋರ್ಟ್ ಮೊರೆ ಹೋದ ರಾಗಿಣಿ..!

ಬೆಂಗಳರು-

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಬಂಧನ ಭೀತಿಯಿಂದ ಪಾರಾಗಲು ರಾಗಿಣಿ ಈಗ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಈಗಾಗಲೇ ರಾಗಿಣಿ ವೊರುದ್ದ ಪ್ರಕರಣ ದಾಖಲಾಗಿದ್ದು ರಾಗಿಣಿ ಅವರಿಗೆ ಈಗ ಬಂಧನ ಭೀತಿ ಸಿರುವಾಗಿದೆ. ಯಾವುದೇ ಕ್ಷಣದಲ್ಲಿಯೂ ರಾಗಿಣಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸುವ ಸಾದ್ಯತೆ ಹೆಚ್ವಾಗಿದೆ. ಹೀಗಾಗಿ ರಾಗಿಣಿ ಕೋರ್ಟ್ ಮೊರೆ ಹೋಗಿದ್ದಾರೆ.

ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ರಾಗಿಣಿ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿ, ನಿರಿಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. ಆದ್ರೆ ಕೋರ್ಟಗ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡದೇ ಸಿಸಿಬಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಸೆ.7ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಇಂದು ಬೆಳಗ್ಗೆ ಮನೆ ಮೇಲೆ ದಾಳಿ ಮಾಡಿದ ಬಳಿಕ ರಾಗಿಣಿ ಈಗಲೂ ಸಿಸಿಬಿ ಪೊಲೀಸರ ವಶದಲ್ಲೇ ಇದ್ದಾರೆ. ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡದ ಕಾರಣ ಪೊಲೀಸರಿಗೆ ಈಗಲೂ ನಟಿಯನ್ನು ಬಂಧಿಸಲು ಅವಕಾಶವಿದೆ.  ಒಂದು ವೇಳೆಯಲ್ಲಿ ಡ್ರಗ್ಸ್ ದಂದೆ ಪ್ರಕರಣದಲ್ಲಿ ಬಂಧನ ಮಾಡಿದರೆ ಜಾಮೀನು ಕೋರಿ ರಾಗಿಣಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

Previous ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿಷೇಧ
Next ತುಪ್ಪದ ಬೆಡಗಿ ರಾ'ಗಿಣಿ' ಅರೆಸ್ಟ್….

You might also like

0 Comments

No Comments Yet!

You can be first to comment this post!

Leave a Reply