ದೇಶಕ್ಕೆ ಮಾದರಿಯಾದ ಕ್ವಾರಂಟೈನ ಕಾರ್ಮಿಕರು..

ದೇಶಕ್ಕೆ ಮಾದರಿಯಾದ ಕ್ವಾರಂಟೈನ ಕಾರ್ಮಿಕರು..

ರಾಜಸ್ಥಾನ-

ರಾಜಸ್ಥಾನದ ಸೀಕರನ ಹಳ್ಳಿಯೊಂದರ ಪ್ರಾಥಮಿಕ ಶಾಲೆಯಲ್ಲಿ ಗುಜರಾತ್, ಮಧ್ಯ ಪ್ರದೇಶದ ಕಾರ್ಮಿಕರನ್ನು ಕ್ವಾರಂಟೈನಲ್ಲಿ ಇಡಲಾಗಿತ್ತು. ಆ ಶಾಲೆ ಎರಡು ದಶಕಗಳಿಂದ ಸುಣ್ಣ ಬಣ್ಣ ಕಾಣದನ್ನು ಮನಗಂಡ ಕಾರ್ಮಿಕರು ಆ ಶಾಲೆಗೆ ಬಣ್ಣ ಹಚ್ಚುವುದಾಗಿ ಆ ಗ್ರಾಮದ ಸರಪಂಚರ ಮುಂದೆ ಪ್ರಸ್ಥಾಪಿಸಿದರು. ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಸರಪಂಚರು,‌ಬಣ್ಣ ಹಚ್ಚಲು ಬೇಕಾಗುವ ಬ್ರಷ್,‌ಪೇಂಟ್ ಮುಂತಾದ ಸರಕುಗಳನ್ನು ತಂದು ಕೊಟ್ಟರು..

ಕಾರ್ಮಿಕರ ಕ್ವಾರಂಟೈನ ಅವಧಿ ಮುಗಿರುವುದರಲ್ಲೇ ಶಾಲೆ ಶೃಂಗಾರಗೊಂಡು ಕಂಗೊಳಿಸುತಿತ್ತು. ಬಣ್ಣ ಹಚ್ಚಿದ್ದಕ್ಕೆ ಹಣ ನೀಡಲು ಸರಪಂಚರು ಮುಂದಾದಾಗ, ಕಾರ್ಮಿಕರು, ಈ ಹಳ್ಳಿ ನಮಗೆ ನಿತ್ಯ ಉಚಿತ ಊಟ ವಸತಿ ನೀಡಿದೆ, ನಾವು ಏನಾದರೂ ವಾಪಸ್ಸು ಈ ಹಳ್ಳಿಗೆ ಕೊಡಬೇಕಲ್ಲವೇ? ಎಂದು ನಯವಾಗಿ ಹಣವನ್ನು ನಿರಾಕರಿಸಿದರು..

Previous ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುತ್ತದೆ ಹತಾಶರಾಗದೆ ಅಧ್ಯಯನಶೀಲರಾಗಿ- ಶಿಕ್ಷಣ ಸಚಿವ ಸುರೇಶ್ ಕುಮಾರ್.
Next ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ಗಳು ಮೂಲೆ ಸೇರುವುದು ಪಕ್ಕಾ…?

You might also like

0 Comments

No Comments Yet!

You can be first to comment this post!

Leave a Reply