ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರೆಲ್ಲರಿಗೂ ಆಹಾರಧಾನ್ಯ ಕೊಡಿ.

ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರೆಲ್ಲರಿಗೂ ಆಹಾರಧಾನ್ಯ ಕೊಡಿ.

ಕಲಬುರಗಿ.ಏ.11

ಲಾಕ್ ಡೌನ್ ಪರಿಣಾಮ ಯಾರು ಅನ್ನಕ್ಕಾಗಿ ಹಸಿವಿನಿಂದ ಬಳಲಬಾರದು. ಜಿಲ್ಲೆಯಲ್ಲಿ ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ 15793 ಅರ್ಜಿದಾರರಿಗೆ ತಾತ್ಕಲಿಕ ಪಡಿತರ ಚೀಟಿ ನೀಡಿ ಕೊರೋನಾ ಸಮಸ್ಯೆ ಮುಗಿಯುವರರೆಗೂ ಅಹಾರಧಾನ್ಯ ನೀಡಬೇಕು ಎಂದು ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಮತ್ತು ಕೊರೋನಾ ಸೋಂಕಿನ ಕಾರಣ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಚರ್ಚೆ ನಡೆಸಿದ ಸಭೆಯಲ್ಲಿ ಮಾತನಾಡುತ್ತ, ತಾತ್ಕಲಿಕ ಪಡಿತರ ಚೀಟಿಯನ್ನು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ವಿತರಿಸಬೇಕು ಎಂದರು.

ಇನ್ನೂ ಜಿಲ್ಲೆಯಲ್ಲಿ ಪಡಿತರ ಚೀಟಿ ಇಲ್ಲದ ಜೋಪಡಿ, ಟೆಂಟ್ ಹಾಕಿಕೊಂಡು ಅಲ್ಲಲ್ಲಿ ಸುಮಾರು 2400 ಅಲೆಮಾರಿ ಕುಟುಂಬಗಳು ವಾಸಿಸುತ್ತಿದ್ದು, ಅವರಿಗೂ ಸಹ ಕೊರೋನಾ ಸಮಸ್ಯೆ ಮುಗಿಯುವವರೆಗೂ ಆಹರಧಾನ್ಯ ವಿತರಣೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Previous ರೋಗಿಗಳಿಗೆ ಚಿಕಿತ್ಸೆ ನೀಡಿ: ಇಲ್ಲವೇ ಕಾನೂನು ಕ್ರಮ.
Next ತಬ್ಲಿಘಿ ಹೋಗಿ ಬಂದವರು ಮಾಹಿತಿ ಕೊಡಿ, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಿ.

You might also like

0 Comments

No Comments Yet!

You can be first to comment this post!

Leave a Reply