ಸ್ಥಳೀಯ ಉತ್ಪನ್ನಗಳ ಖರೀದಿಗೆ ಕ್ರಮ : ಸಚಿವ ಬಿ.ಸಿ.ಪಾಟೀಲ.

ಸ್ಥಳೀಯ ಉತ್ಪನ್ನಗಳ ಖರೀದಿಗೆ ಕ್ರಮ : ಸಚಿವ ಬಿ.ಸಿ.ಪಾಟೀಲ.

ಬಾಗಲಕೋಟೆ : ಏಪ್ರೀಲ್ 06

ಬಹುತೇಕ ಮಾರುಕಟ್ಟೆಗಳು ಹೊರ ರಾಜ್ಯದಲ್ಲಿ ಇರುವದರಿಂದ ಸ್ಥಳೀಯ ರೈತರ ಕೃಷಿ ಉತ್ಪನ್ನಗಳ ಖರೀದಿಗೆ ಕ್ರಮಕೈಗೊಳ್ಳುವುದಾಗಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಹೇಳಿದರು.

 ಬಾಗಲಕೋಟೆಯ ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಕೋವಿಡ್ ಕುರಿತು ಕೃಷಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಸರಕಾರ ರೈತರ ಪರವಾಗಿದ್ದು, ಸಮಾಜದ ಒಳಿತಿಗಾಗಿ ಸಾಮಾಜಿಕ ಕಫ್ರ್ಯೂ ಹೇರಲಾಗಿದೆ. ಮುಂಗಾರು ಆರಂಭಗೊಳ್ಳುವದರಲ್ಲಿ ರೈತರಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರಗಳ ತೊಂದರೆ ನಿವಾರಿಸಲಾಗುವುದೆಂದು ಹೇಳಿದ್ದಾರೆ.

ಲಾಕ್‍ಡೌನ್‍ನಿಂದ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿರುವದಿಲ್ಲ. ಉತ್ಪನ್ನ ಸಾಗಾಟಗಾರರಿಗೆ ಗ್ರೀನ್ ಪಾಸ್ ನೀಡಲಾಗುತ್ತಿದೆ. ಹೊರ ರಾಜ್ಯಕ್ಕೆ ಕಳುಹಿಸುವವರಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪರವಾನಿಗೆ ನೀಡಲಾಗುತ್ತಿದೆ. ಕಳೆದೆರಡು ದಿನಗಳಿಂದ ಸಾಗಾಣಿಕೆ ಆಗುತ್ತಿದೆ. ರಾಜ್ಯದಲ್ಲಿ ಏಪ್ರೀಲ್ 14 ರವರೆಗೆ 8 ಲಕ್ಷ ಲೀಟರ್ ಹಾಲು ವಿತರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ ಕೃಷಿ ಚಟುವಟಿಕೆಗಳ ಅಭಿವೃದ್ದಿಗೆ 10 ಕೋಟಿ ರೂ.ಗಳ ಅನುದಾನವನ್ನು ಕೃಷಿ ಸಚಿವರಲ್ಲಿ ಬೇಡಿಕೆ ಇಟ್ಟರು. ಜಿಲ್ಲೆಯಲ್ಲಿ ಈಗಾಗಲೇ 700 ನ್ಯಾಯಬೆಲೆ ಅಂಗಡಿಗಳ ಮೂಲಕ ಎರಡು ತಿಂಗಳ ಪಡಿತರ ವಿತರಿಸಲಾಗುತ್ತಿದೆ. ಉಜ್ವಲ ಯೋಜನೆಯಡಿ 3 ಸಿಲೆಂಡರ್‍ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 1 ಸಾವಿರ ಹಾಗೂ ಬಡವರಿಗಾಗಿ ಹಾಲು ವಿತರಿಸಲು ಜಿಲ್ಲಾವಾರು ಬೇಡಿಕೆಗೆ ಅನುಸಾರ ಹಂಚಿಕೆ ಮಾಡಲು ಸಚಿವರಿಗೆ ತಿಳಿಸಿದರು.

Previous ಕೊರೊನಾ ಸೊಂಕು ಪರೀಕ್ಷೆಗಾಗಿ ಇನ್ಮುಂದೆ ಕಾಯ್ಬೆಕಿಲ್ಲ..! ಬಳ್ಳಾರಿ ವಿಮ್ಸ್ ನಲ್ಲಿಯೇ ವೈರಾಣು ಪರೀಕ್ಷಾ ಲ್ಯಾಬ್ ಆರಂಭ.
Next ಹುಬ್ಬಳ್ಳಿ ಕಿಮ್ಸ್ ನಿಂದ 24*7 ದೂರವಾಣಿ ವೈದ್ಯರ ಸಲಹಾ ಕೇಂದ್ರ ಸ್ಥಾಪನೆ.

You might also like

0 Comments

No Comments Yet!

You can be first to comment this post!

Leave a Reply