ಖಾಸಗಿ ವೈದ್ಯಕೀಯ ಸೇವೆ; ಪಾಸ್ ನೀಡಲು ನಿರ್ದೇಶನ.

ಖಾಸಗಿ ವೈದ್ಯಕೀಯ ಸೇವೆ; ಪಾಸ್ ನೀಡಲು ನಿರ್ದೇಶನ.

ಬೆಳಗಾವಿ, ಏ.೪

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಸಾಮಾನ್ಯ ವೈದ್ಯಕೀಯ ಸೇವೆಗೆ ಮುಂದಾಗುವ ಖಾಸಗಿ ವೈದ್ಯರು ಮತ್ತು ಕ್ಲಿನಿಕ್ ಗಳಿಗೆ ಪಾಸ್ ಸೇರಿಂದತೆ ಅಗತ್ಯ ನೆರವು ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವರಾದ ಜಗದೀಶ್ ಶೆಟ್ಟರ್ ಸೂಚನೆ ನೀಡಿದ್ದಾರೆ ಬೆಳಗಾವಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ಘೋಷಿತ ಕೊಳಗೇರಿ ಪ್ರದೇಶಗಳಲ್ಲಿ ಉಚಿತ ಹಾಲು ವಿತರಣೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಉಚಿತ ಹಾಲು ವಿತರಣೆ ಹೊಸದಾಗಿ ಆರಂಭಿಸಿರುವುದರಿಂದ ಮೊದಲ ಒಂದೆರಡು ದಿನಗಳಲ್ಲಿ ತೊಂದರೆ ಕಂಡುಬರುವುದು ಸಹಜ. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

 ಹಾಲು ವಿತರಣೆಗೆ ಸಂಬಂಧಿಸಿದಂತೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಕೊಳಗೇರಿಗಳಲ್ಲಿನ ಕುಟುಂಬಗಳ ಮಾಹಿತಿಯನ್ನು ನೀಡಿದರೆ ಕೆ.ಎಂ.ಎಫ್ ಜತೆ ಮಾತನಾಡಿ ಅಗತ್ಯ ಇಂಡೆಂಟ್ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಪಡಿತರ ವಿತರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರಲ್ಲದೇ ನೋಂದಣಿ ಮಾಡಿಕೊಂಡಿರದ ಕಾರ್ಮಿಕರಿಗೂ ಸರ್ಕಾರದ ಸಹಾಯಧನ ನೀಡುವ ಬಗ್ಗೆ ಪರಿಶೀಲಿಸಲು ಸಲಹೆ ನೀಡಿದರು. ಕೇಂದ್ರ ರೈಲ್ವೆ ಇಲಾಖೆಯ ಸಚಿವರಾದ ಸುರೇಶ್ ಅಂಗಡಿ ಅವರು ಮಾತನಾಡಿ, ಐಸೋಲೇಷನ್ ವಾರ್ಡನಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯವಿರುವ ಸಾಮಗ್ರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

Previous ಕಾನೂನು ಸುವ್ಯವಸ್ಥೆ; ಸೂಕ್ತ ಕ್ರಮಕ್ಕೆ ಸಚಿವ ಜಗದೀಶ್ ಶೆಟ್ಟರ್ ಸೂಚನೆ.
Next ಲಾಕ್ ಡೌನ್ ಆದೇಶ 31ರ ಮದ್ಯರಾತ್ರಿ 12 ಗಂಟೆಯಿಂದ ಏಪ್ರಿಲ್ 14 ರ ಮದ್ಯರಾತ್ರಿ 12 ಗಂಟೆವರೆಗೆ ಜಾರಿ.

You might also like

0 Comments

No Comments Yet!

You can be first to comment this post!

Leave a Reply