ಮಳೆ ಹಾಡಿನ ಮೋಹಕ್ಕೆ ಪವರ್ ಸ್ಟಾರ್ ಬೋಲ್ಡ್..!

ಮಳೆ ಹಾಡಿನ ಮೋಹಕ್ಕೆ ಪವರ್ ಸ್ಟಾರ್ ಬೋಲ್ಡ್..!

ಬೆಂಗಳೂರು-

ಕನ್ನಡದ ಸಲಗ ಸಿನಿಮಾ ಬೇರೆ ಥರ ಸೌಂಡ್ ಮಾಡುತ್ತಿದೆ. ದುನಿಯಾ ವಿಜಯ್ ನಾಯಕರಾಗಿ ನಿರ್ದೇಶಕರೂ ಆಗಿರೋ ಈ ಸಿನಿಮಾ, ವಿಶೇಷ ಸೆಳತ ಹುಟ್ಟಿಸಿದೆ. ಆ ಸೆಳೆತ ಹೆಸರು ಸಂಗೀತ..ನಿಜ.. ಸಲಗ ಚಿತ್ರದ ಸಂಗೀತ ಸೂಪರ್ ಆಗಿದೆ. ಟಗರು ಚಿತ್ರ ಖ್ಯಾತಿಯ ಚರಣ್ ರಾಜ್ ಸಂಗೀತದ ಈ ಚಿತ್ರದ ಮಳೆಯೇ ಹಾಡು ಜನರನ್ನ ಹಿಡಿದಿಡುತ್ತಿದೆ. ಇದರ ಸಾಹಿತ್ಯ ಅದ್ಭುತವಾಗಿಯೇ ಇದೆ.

ನಾಗಾರ್ಜುನ್ ಶರ್ಮಾ ಬರೆದಿರೋ ಈ ಗೀತೆ ನಿಮ್ಮನ್ನ ಕಾಡುತ್ತದ್ದೆ. ಮಳೇ ಮಳೇ ಅಂಬೆಗಾಲಿಡುತಾ ಸುರಿಯೇ ಅಂತಲೇ ಸಾಗುತ್ತದೆ. ಪ್ರತಿ ಸಾಲಲ್ಲೂ ಹೊಸ ಭಾವವೇ ಇದೆ. ಮಳೆ ಬೇರೆ ಬೇರೆ ಥರವೇ ಎಲ್ಲರಿಗೂ ಕಾಣುತ್ತದೆ. ನಾಗಾರ್ಜುನ್ ಶರ್ಮಾ ಅವ್ರಿಗೆ ಸುರಿಯೋ ಮಳೆ ವಿಭಿನ್ನವಾಗಿ ಕಂಡು ಸಲಗ ಚಿತ್ರದ ಹಾಡಿಗೆ ಸಾಲಾಗಿವೆ.

suddinow
suddinow

ಚಿತ್ರದ ಛಾಯಾಗ್ರಾಹಕ ಶಿವ ಸೇನಾ ಮಳೇ ಹಾಡನ್ನ ಮೋಹಕವಾಗಿಯೇ ಚಿತ್ರೀಕರಿಸಿದ್ದಾರೆ.ಚರಣ್ ರಾಜ್ ಸಂಗೀತಕ್ಕೆ ಗಾಯಕ ಸಂಜಿತ್ ಹೆಗಡೆ ಹಾಗೂ ಐಶ್ವರ್ಯ ರಂಗರಾಜನ್ ಜೀವ ತುಂಬಿದ್ದಾರ ಕೋರಿಯೋಗ್ರಾಫರ್ ಮೋಹನ್ ಕಲ್ಪನೆಯ ನೃತ್ಯದಲ್ಲಿ ನಾಯಕ ದುನಿಯಾ ವಿಜಯ್ ಮತ್ತು  ನಾಯಕಿ ಸಂಜನಾ ಆನಂದ್ ಮಳೆ ಹಾಡಲ್ಲಿ ಪ್ರಣಯ ಪಕ್ಷಿಗಳ ಹಾಗೆ ಕಾಣಿಸಿಕೊಂಡಿದ್ದಾರೆ.

suddinow
suddinow

ನಿರ್ಮಾಪಕ ಕೆ.ಪಿ.ಶ್ರೀಕಾಂತ್ ವೆಚ್ಚದಲ್ಲಿ ಮೂಡಿ ಬಂದ ಸಲಗ ಕನ್ನಡದ ಹೊಸ ಭರವಸೆಯ ಸಿನಿಮಾ ಆಗಿದೆ. ಸದ್ಯಕ್ಕೆ ಸಲಗ ಚಿತ್ರದ ಮಳೆಯೇ ಹಾಡು ಫುಲ್ ಸೌಂಡ್ ಮಾಡುತ್ತಿದೆ. ಹಾಗೇನೆ ಈ ಸಲಗ ಚಿತ್ರಕ್ಕೆ ಟಗರು ಚಿತ್ರದ ಟೀಮ್ ಕೆಲಸ ಮಾಡಿದೆ.ಅಲ್ಲಿಗೆ ಚಿತ್ರದ ಬಗ್ಗೆ ನಿರೀಕ್ಷೆ ಈಗಲೇ ದೊಡ್ಡಮಟ್ಟದಲ್ಲಿಯೇ ಇದೆ.

ಕೊನೆ ಮಾತು: ಸಲಗ ಚಿತ್ರದ ಮಳೆಯೇ ಹಾಡನ್ನ ಪವರ್ ಸ್ಟಾರ್ ಪುನಿತ್ ನೋಡಿ ಮೆಚ್ಚಿದ್ದಾರೆ. ಕೊಂಡಾಡಿದ್ದಾರೆ. ಆಲ್ ದಿ ಬೆಸ್ಟ್ ಅಂತಲೂ ಹೇಳಿಕಳಿಸಿದ್ದಾರೆ. ನೀವೂ ಒಮ್ಮೆ ನೋಡಿ..

-ರೇವನ್ ಪಿ.ಜೇವೂರ್

Previous ಮಿತವಾಗಿರಲಿ ಯೂರಿಯಾ ರಸಗೊಬ್ಬರ ಬಳಕೆ
Next ಲಂಚಕ್ಕೆ ಬೇಡಿಕೆ ಇಟ್ಟ ತಹಶಿಲ್ದಾರ ಅಮಾನತ್ತು

You might also like

0 Comments

No Comments Yet!

You can be first to comment this post!

Leave a Reply