ಆನ್ಲೈನ್ , ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿ.

ಆನ್ಲೈನ್ , ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿ.

ಮಂಗಳೂರು ಏಪ್ರಿಲ್ 07

 ವಿದ್ಯುತ್ ಗ್ರಾಹಕರು 3 ತಿಂಗಳ ಅವಧಿಗೆ (ಜೂನ್ 2020 ರವರೆಗೆ) ಬಿಲ್ ಪಾವತಿಸುವುದನ್ನು ಮುಂದೂಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ,  ಆದರೆ ಈ ವಿಷಯದ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಿಗಾಗಲೀ ಯಾವುದೇ ನಿರ್ದೇಶನಗಳಿರುವುದಿಲ್ಲ. ಹೀಗಾಗಿ ಗ್ರಾಹಕರು ವಿದ್ಯೂತ್ ಬಿಲ್ ಕಟ್ಟಲೇ ಬೇಕು. ವಿದ್ಯುತ್ ಗ್ರಾಹಕರೇ, ತಾವು ಮನೆಯಿಂದಲೇ ತಮ್ಮ ಕಚೇರಿ ಕೆಲಸಗಳನ್ನು ತೊಂದರೆ ಇಲ್ಲದೆ ನಿರ್ವಹಿಸಲು, ಅಡಚಣೆ ರಹಿತ ವಿದ್ಯುತ್ ನೀಡಲು 24×7 ಮೆಸ್ಕಾಂ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನು ಕೈಗೊಂಡಿರುತ್ತವೆ.  ಈ ಸಮಯದಲ್ಲಿ ತಾವು ಮನೆಯಲ್ಲಿ ಸುರಕ್ಷಿತವಾಗಿರಲು ಹಾಗು ಆರೋಗ್ಯವಂತರಾಗಿರಲು ಮೆಸ್ಕಾಂ ಬಯಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ…

Previous ಕನ್ನಡ ಸಿನೆಮಾ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಆರ್ಥಿಕ ನೆರವು ನೀಡುತ್ತಾರೆ..
Next ಬೆಂಗಳೂರಿನಿಂದ ಕಾಲ್ನಡಿಗೆ ಹೊರಟ ಜೀವ ಸಾವು.

You might also like

0 Comments

No Comments Yet!

You can be first to comment this post!

Leave a Reply