ರಸ್ತೆಗೆ ಇಳಿಯುವ ಮುನ್ನ ಒಂದು ಸಾರಿ ಯೋಜಿಸಿ..! ಕಿವಿಮಾತು ಅಥವಾ ಬುದ್ದಿ ಹೇಳುವ ಮಾತೇ ಇಲ್ಲ.

ರಸ್ತೆಗೆ ಇಳಿಯುವ ಮುನ್ನ ಒಂದು ಸಾರಿ ಯೋಜಿಸಿ..! ಕಿವಿಮಾತು ಅಥವಾ ಬುದ್ದಿ ಹೇಳುವ ಮಾತೇ ಇಲ್ಲ.

ಬೆಂಗಳೂರು –ಏ-9

ಲೌಕೌಡೌನ್ ಜಾರಿಯಾದ ದಿನದಿಂದ ಸಿಲಿಕಾನ್ ಸಿಟಿಯಲ್ಲಿ ಜನರು ಪೊಲೀಸ್ ಪಾಸ್ ಇಲ್ಲದೇ ಬೇಕಾಬಿಟ್ಟಿ ಓಡಾಡ್ತಿದ್ದಾರೆ. ಹೀಗಾಗಿ ಖುದ್ದು ಗೃಹ ಸಚಿವ ಬಸವರಾಜ್ ಬೊಮ್ಮಯಿ ಹಾಗೂ ನಗರ ಆಯುಕ್ತ. ಭಾಸ್ಕರ್ ರಾವ್, ಟ್ರಾಫಿಕ್ ಆಯುಕ್ತ ರವೀಕಾಂತೆಗೌಡ ಹಾಗೂ ಸಿಸಿಬಿ‌ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಖಾಸಗಿ ವಾಹನದಲ್ಲಿ ರಸ್ತೆಗೆ ಮಪ್ತಿಗೆ ಇಳಿದು ನಿಯಮ ಉಲ್ಲಂಘನೆ ಮಾಡಿದವರ ವಾಹನ ಜಪ್ತಿ ಮಾಡಿದ್ದಾರೆ.

ಇದೇ ವೇಳೆಯಲ್ಲಿ ಮಾತನಾಡಿದ ಆಯುಕ್ತ ರವಿಕಾಂತೇಗೌಡ ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರು ರಸ್ತೆಗೆ ಇಳೀತಾರೆ, ಮತ್ತೊಂದೆಡೆ ಐಷಾರಾಮಿ, ರಾಜಕಾರಣಿಗಳ ಮಕ್ಕಳು ಎಂಬ ಹೆಸರಿನಲ್ಲಿ ಪೊಲಿಸರ ಕೈಯಿಂದ ತಪ್ಪಿಸಿಕೊಳ್ತಾರೆ ಆದ್ದರಿಂದ ಗಾಡಿ ಸೀಜ್​ ಮಾಡುತ್ತಿದ್ದೇವೆ ಇನ್ನು ಮುಂದೆವಾಹನ ಸವಾರರು ಸುಮ್ಮನೇರಸ್ತೆಗೆ ಇಳಿಯುವ ಮುನ್ನ ಒಂದು ಸಾರಿ ಯೋಚಿಸಿ ಎಂದು ಜನರಗೆ ಎಚ್ಚರಿಸಿದ್ದಾರೆ.

ಅಲ್ಲದೇ ಯಾರಿಗೂ ಕಿವಿ‌ಮಾತು ಅಥವಾ ಬುದ್ದಿ ಹೇಳುವ ಮಾತೇ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರದ NDMA(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ದ ಆ್ಯಕ್ಟ್) ಅಡಿ ಜಪ್ತಿ ಗಾಡಿಗಳನ್ನ ಜಪ್ತಿ ಮಾಡಲಾಗುವುದು ಎಂದು ವಾಹನ ಸವಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ…

Previous ಜಿಲ್ಲಾಡಳಿತ ಕಚೇರಿಯ ಕಿಟಕಿಗಳಲ್ಲಿ ಕುಳಿತು ಆಹಾರಕ್ಕಾಗಿ ಹಪಹಪಿಸಿದ ವಾನರ ಸೈನ್ಯ.
Next ಮಂಗಳಮುಖಿಯರ ಸಹಾಯಕ್ಕೆ ಧಾವಿಸಿದ ರಾಧಿಕಾ ಕುಮಾರಸ್ವಾಮಿ.

You might also like

0 Comments

No Comments Yet!

You can be first to comment this post!

Leave a Reply