ಪ್ರತಿ ನಿತ್ಯ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಬೇಕರಿ ತೆರೆಯಲು ಅನುಮತಿ.

ಪ್ರತಿ ನಿತ್ಯ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಬೇಕರಿ ತೆರೆಯಲು ಅನುಮತಿ.

ಧಾರವಾಡ ಏ.07

 ಕೋವಿಡ್-19ರ ಲಾಕ್‍ಡೌನ್ ಅವಧಿಯಲ್ಲಿ ಕೆಲವು ರೋಗಿಗಳು, ಹಿರಿಯನಾಗರಿಕರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಅಗತ್ಯವಾಗಿರುವ ಬೇಕರಿ ಪದಾರ್ಥಗಳ ಅವಶ್ಯಕತೆ ಕಂಡುಬಂದಿರುವುದರಿಂದ ಸರ್ಕಾರ ಬೇಕರಿಗಳನ್ನು ತೆರೆಯಲು ವಿನಾಯತಿ ನೀಡಿದೆ. ಜಿಲ್ಲೆಯ ಬೇಕರಿಗಳು ಕೂಡ ಬ್ರೆಡ್, ಬಿಸ್ಕಿಟ್, ರಸ್ಕ್, ಬನ್ ನಂತಹ ಆಯ್ದ ಪದಾರ್ಥಗಳನ್ನು ಪ್ರತಿದಿನ ಬೆಳಿಗ್ಗೆ 6 ರಿಂದ 10ಗಂಟೆಯವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಬೇಕರಿ ಪದಾರ್ಥಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಬೇಕರಿ ಮಾಲೀಕರ ಸಭೆನಡೆಸಿ ಮಾತನಾಡಿದ ಅವರು, ಭಾರತ ಸರ್ಕಾರದ ಗೃಹ ಇಲಾಖೆಯು ಬೇಕರಿ ಪದಾರ್ಥಗಳ ಉತ್ಪಾದನೆ ಮತ್ತು ಪೂರೈಕೆಗೆ ಅವಕಾಶ ಕಲ್ಪಿಸಿದೆ. ಕರ್ನಾಟಕ ಸರ್ಕಾರವೂ ಪೂರಕ ಸುತ್ತೋಲೆ ಹೊರಡಿಸಿ, ಬೇಕರಿ ಕಾರ್ಮಿಕರು ಮತ್ತು ಉತ್ಪಾದನಾ ಘಟಕಗಳಲ್ಲಿ ಉನ್ನತ ಮಟ್ಟದ ಆರೋಗ್ಯ, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಂಡು ಬ್ರೆಡ್, ಬಿಸ್ಕಿಟ್, ರಸ್ಕ್, ಬನ್ ನಂತಹ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದು. ಪಾರ್ಸೆಲ್ ನೀಡಲು ಮಾತ್ರ ಅವಕಾಶವಿದೆ. ಯಾವುದೇ ಕಾರಣಕ್ಕೂ ಬೇಕರಿಯಲ್ಲಿಯೇ ಸೇವೆ ನೀಡಬಾರದು. ಕಾರ್ಮಿಕರ ಆರೋಗ್ಯ ತಪಾಸಣೆ, ಪದೆ ಪದೆ ಕೈತೊಳೆಯುವುದು, ಮಾಸ್ಕ್ ಧರಿಸುವುದು, ಬಿಸಿನೀರು ಬಳಸುವುದು, ಕೈಗವಸು ಹಾಕಿಕೊಳ್ಳುವದನ್ನು ಕಡ್ಡಾಯಗೊಳಿಸಲಾಗಿದೆ ಎಂದಿದ್ದಾರೆ…

Previous ಗದಗ ಜಿಲ್ಲೆಯಲ್ಲಿ ಮೊದಲ ಪ್ರಕರಣ.
Next ಕೊರೊನಾ ಸೋಂಕು: ಖಚಿತಪಟ್ಟ ಮೂವರಲ್ಲಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ.

You might also like

0 Comments

No Comments Yet!

You can be first to comment this post!

Leave a Reply