ಪೇಟಿಎಂ ನಲ್ಲೂ ಬಂತು  ಷೇರು ವಹಿವಾಟು

ಪೇಟಿಎಂ ನಲ್ಲೂ ಬಂತು ಷೇರು ವಹಿವಾಟು

ನವದೆಹಲಿ

ಹಣಕಾಸಿನ ವಿಷಯಕ್ಕೆ ಸಂಭಂದಿಸಿದಂತೆ ಅತೀ ಹೆ್ಚ್ಉ ಬಳಕೆಯಲ್ಲಿರುವ ಆ್ಯಪ್ ಅಂದರೆ ಅದುವೇ ಪೇಟಿಎಂ.ಹಣದ  ಕೊಡು ಕೊಳ್ಳುವಿಕೆಯಲ್ಲಿ ಹೆಚ್ಚಿನ ಜನ ಮನ್ನನೇ ಪಡೆದಿರುವ ಪೇಟಿಎಂ, ಇಷ್ಟು ದಿನ ಕೇವಲ ವಸ್ತುಗಳ ಖರೀದಿಗೆ, ಜನರ ಲೇವಾದೆವಿ ವ್ಯವಹಾರಗಳಲ್ಲಿ ಮಾತ್ರ ಬಳಸುತ್ತಿದ್ದರು. ಇದೀಗ್ ಪೇಟಿಎಂ  ಮನಿ  ಮೂಲಕ ಷೇರು ವ್ಯವಹಾರವನ್ನು ಕೂಡಾ ಮಾಡಬಹುದಾಗಿದೆ.

2022 ರ ವೆಳೆಗೆ ಹಣಕಾಸಿನ ನಿರ್ವಹಣಾ ಕ್ಷೇತ್ರದಲ್ಲಿ ಹೆಚ್ಚಿನ ಪಾಲನ್ನು ಪಡೆಯಬೇಕೆಂಬ ಇಚ್ಚೇಯನ್ನಿಟ್ಟುಕೊಂಡಿದೆ. ಆದ್ದರಿಂದ ಪೇಟಿಎಂ ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ. ಇದರಿಂದ ಷೇರು ಮಾರುಕಟ್ಟೆಯಲ್ಲಿ  ಹಣ ಹೂಡಿಕೆ ಮಾಡುವವರಿಗೆ ಅನುಕೂಲವಾಗುತ್ತಿದೆ.  ಇದೀಗ್ ಪೇಟಿಎಂ ಮನಿ ಮೂಲಕ ಗ್ರಾಹಕರು ಷೇರುಗಳನ್ನು ಖರೀದಿಸಬಹುದಾಗಿದೆ. ಈಗಾಗಲೇ ಷೇರು ವ್ಯವಹಾರಗಳನ್ನು ಕೈಕೊಳ್ಳುತ್ತಿದ್ದಂತಹ ಜನರು, ಪೇಟಿಎಂ ಮನಿ ಮೂಲಕ ಷೇರುಗಳನ್ನು ಖರೀದಿಸುತ್ತಿದ್ದಾರೆ.

ಮ್ಯೂಚುವಲ್ ಪಂಡ್ ಗಳಲ್ಲಿ ಹೂಡಿಕೆ ಮಾಡುವುದನ್ನು ಈಗಾಗಲೇ  ಪೇಟಿಎಂ ಮನಿ ಗ್ರಾಹಕರಿಗೆ ವರ್ಷಗಳಿಂದ ನೀಡುತ್ತದೆ. ಮತ್ತು ರಾಷ್ಟ್ರೀಯ ಪಿಂಚಣಿಯ ಮೇಲಿನ ಹೂಡಿಕೆಯ ಯೋಜನೆಗೂ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಇದೀಗ್ ಕೊಂಚ ಬದಲಾವನೆ ತಂದಿದೆ.  ಎನ್ ಪಿಎಸ್ ನಲ್ಲಿ  ಹೂಡಿಕೆ ಮಾಡುತ್ತಿರುವ ಗ್ರಾಹಕರು ಇನ್ನು ಮುಂದೆ ಪೇಟಿಎಂ ಮನಿ ಮೂಲಕ ಷೇರುಗಳ ಮೇಲಿನ ಹೂಡಿಕೆಯನ್ನು ಮುಂದುವರೆಸಬಹುದಾಗಿದೆ.

ಇದರಿಂದ ಜನರಿಗೆ ಉಪಯೋಗ ಆಗುವುದರ ಮೂಲಕ ಕಂಪನಿಯ ಆರ್ಥಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇದು ಸಹಾಯಕಾರಿಯಾಗುತ್ತದೆ.  ಇನ್ನು ಎರಡು ಲಕ್ಷಕ್ಕೂ ಅಧಿಕ ಜನರು ಖಾತೆಯನ್ನು ತೆರೆದು ಷೇರಗಳ ಕೊಂಡು ಕೊಳ್ಳುವ ವ್ಯವಹಾರದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ ಎಂದು ಪೇಟಿಎಂ ಹೇಳಿಕೊಂಡಿದೆ.

Previous ಟಾಟಾ ಮೋಟರ್ಸ್ ಗೆ ವರವಾದ ಕರೋನಾ ಸೋಂಕು
Next ನೂರು ಜನರ ಹೆರಗಿ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾದ ಆಸ್ಪತ್ರೆ.

You might also like

0 Comments

No Comments Yet!

You can be first to comment this post!

Leave a Reply