ಗ್ರಾಮೀಣ ಪ್ರದೇಶಗಳಲ್ಲಿ ತಾಜಾ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ.

ಗ್ರಾಮೀಣ ಪ್ರದೇಶಗಳಲ್ಲಿ ತಾಜಾ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ.

ಚಾಮರಾಜನಗರ, ಏಪ್ರಿಲ್ 03

 ಕೊರೊನಾ ವೈರಸ್ ಹರಡಿರುವ ಹಿನ್ನೆಲೆಯಲ್ಲಿ ಇಡೀ ದೇಶವೇ  ದಿಗ್ಭಂಧನಕ್ಕೊಳಗಾಗಿದ್ದು. ಚಾಮರಾಜನಗರ ಜಿಲ್ಲೆಯಲ್ಲಿಯೂ ಸಹ ಲಾಕ್‍ಡೌನ್ ಜಾರಿಗೊಳಿಸಿರುವರಿಂದ ಸಾರ್ವಜನಿಕರಿಗೆ ದಿನಬಳಕೆಯ ಅಗತ್ಯ ವಸ್ತುಗಳ ಕೊರತೆ ಕಾಡಿತ್ತು. ಇದರಿಂದ ನಗರಗಳಿಗಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಯಾಗಿ ಪರಿಣಮಿಸಿತ್ತು. ಈ ಹಿನ್ನಲೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲು ಅನಾನುಕೂಲವಾಗಿತ್ತು.  ಈ ತೊಂದರೆಯನ್ನು ನಿವಾರಿಸಲು ಜಿಲ್ಲಾಡಳಿತದ ವತಿಯಿಂದ ಹಾಪ್‍ಕಾಮ್ಸ್ ಮೂಲಕ ತೋಟಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಮಹಿಳಾ ಒಕ್ಕೂಟಗಳ ಮೂಲಕ ಜಿಲ್ಲೆಯಲ್ಲಿರುವ  ಸುಮಾರು 73 ಮಹಿಳಾ ಒಕ್ಕೂಟಗಳು ಹಾಗೂ ರೈತ ಉತ್ಪಾದಕ ಕಂಪನಿಗಳ ಮುಖೇನ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ವಾರದಲ್ಲಿ 3 ದಿನಗಳಿಗೊಮ್ಮೆ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಧಾನ್ಯಗಳ ಜೊತೆಗೆ ತರಕಾರಿ ಲಭ್ಯವಿರುವುದರಿಂದ ಸಾರ್ವಜನಿಕರಿಗೆ ಅನುಕುಲ ಆಗಲಿದೆ

Previous ದೆಹಲಿಗೆ ಪ್ರಯಾಣ ಮಾಡಿ ಬಂದವರ ಮಾಹಿತಿ ನೀಡಲು ಸೂಚನೆ.
Next ಕೊರೋನ ನಿಯಂತ್ರಣದಲ್ಲಿ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ: ಎಸ್.ಆರ್.ಉಮಾಶಂಕರ್.

You might also like

0 Comments

No Comments Yet!

You can be first to comment this post!

Leave a Reply