ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಹರಿಯಾಣ ಸರ್ಕಾರ ಸಂಬಳವನ್ನು ದ್ವಿಗುಣ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಹರಿಯಾಣ ಸರ್ಕಾರ ಸಂಬಳವನ್ನು ದ್ವಿಗುಣ.

ಚಂಡಿಗಢ

ವೈದ್ಯೋ ನಾರಾಯಣ ಹರಿಯನ್ನುವ ಮಾತು ನಿಜಕ್ಕು ಸಥ್ಯ. ಆದ್ರೇ ಈ ಮಾತು ಎಲ್ಲರ ಅನುಭವಕ್ಕೆ ಬಂದಿದೆ. ಹೌದು ದೇಶಾದ್ಯಂತ ಕೊರೊನಾ ಸೋಂಕಿತರಿಗೆ ಹಗಲು ರಾತ್ರಿ ಎನ್ನದೇ ತಮ್ಮ ಜೀವವನ್ನು ಲೆಕ್ಕಿಸಿದ ವೈದ್ಯರು ಮತ್ತು ಸಿಬ್ಬಂಧಿ ದುಡಿಯುತ್ತಿದ್ದಾರೆ. ಹೀಗಾಗಿ ಚಿಕಿತ್ಸೆ ನೀಡುವ ವೈದ್ಯರಿಗೆ ಹರಿಯಾಣ ಸರ್ಕಾರ ಸಂಬಳವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದೆ. ದೇಶದಲ್ಲಿ ಕೊರೊನಾ ಸಂಪೂರ್ಣವಾಗಿ ಮಾಯವಾಗುವವರೆಗೂ ರಾಜ್ಯದಲ್ಲಿನ ಎಲ್ಲ ಮೆಡಿಕಲ್​ ಸ್ಟಾಫ್‌​, ನರ್ಸ್, ಆ್ಯಂಬುಲೆನ್ಸ್​ ಸಿಬ್ಬಂದಿ, ಔಷಧಿ ವಿತರಕರು​ ಹಾಗೂ ಪೌರಕಾರ್ಮಿಕರಿಗೆ ಸಂಬಳ ದ್ವಿಗುಣಗೊಳಿಸಿ ಸರ್ಕಾರ ಆದೇಶ ನೀಡಿದೆ ಈ ಬಗ್ಗೆ .

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹರಿಯಾಣ ಸಿಎಂ ಮನೋಹರಲಾಲ್​ ಖಟ್ಟರ್​, ವೈದ್ಯರಿಗೆ 50 ಲಕ್ಷ, ನರ್ಸ್​ಗಳಿಗೆ 30 ಲಕ್ಷ, ಪ್ಯಾರಾ ಮೆಡಿಕಲ್​​ ಸಿಬ್ಬಂದಿಗೆ 20 ಲಕ್ಷ ಹಾಗೂ ಪೌರಕಾರ್ಮಿಕರಿಗೆ 10 ಲಕ್ಷ ರೂಗಳ ವಿಮಾ ಸೌಲಭ್ಯವನ್ನೂ ನೀಡಿದ್ದಾರೆ. ಇದರ ಜತೆಗೆ 5 ಕೋಟಿ ರೂ ವೆಚ್ಚದಲ್ಲಿ 2,588 ಪಂಚಾಯ್ತಿಗಳಿಗೆ ಸ್ಯಾನಿಟರಿ ಸಾಮಾಗ್ರಿ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಕೊನೆಯ ವೈರಸ್ ಸೋಂಕಿತ ಗುಣಮುಖ ಆಗುವವರೆಗೂ  ಈ ಸೌಲಭ್ಯ ಮುಂದುವರೆಯಲಿದೆಎಂದಿದ್ದಾರೆ

Previous ಮಂಗಳಮುಖಿಯರ ಸಹಾಯಕ್ಕೆ ಧಾವಿಸಿದ ರಾಧಿಕಾ ಕುಮಾರಸ್ವಾಮಿ.
Next ವೈದ್ಯಕೀಯ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಉಭಯ ದೇಶಗಳ ಮನವಿ.

You might also like

0 Comments

No Comments Yet!

You can be first to comment this post!

Leave a Reply