ವಾರಸುದಾರರಿಗೆ ಮೊಬೈಲ್ ಹಿಂದಿರುಗಿಸಿದ ಬಸ್‍ನಿಲ್ದಾಣ ಅಧಿಕಾರಿ

ವಾರಸುದಾರರಿಗೆ ಮೊಬೈಲ್ ಹಿಂದಿರುಗಿಸಿದ ಬಸ್‍ನಿಲ್ದಾಣ ಅಧಿಕಾರಿ

ಧಾರವಾಡ-

ಸಾಮಾನ್ಯವಾಗಿ ಯಾರದ್ದಾದರೂ  ಮೊಬೈಲ್ ಸಿಕ್ಕರೆ, ಮೊದಲು ಸ್ವಿಚ್ ಆಪ್ ಮಾಡಿ ಬಚ್ಚಿಟ್ಟುಕೊಳ್ಳುವ ಜನರೆ ಹೆಚ್ಚು. ಆದರೆ ಧಾರವಾಡ ನಗರ ಬಸ್ ನಿಲ್ಧಾನದ ಅಧಿಕಾರಿ ಅದರಗುಂಚಿ  ಅವರು ಬೆಲೆ ಬಾಳುವ ಮೊಬೈಲ್ ನ್ನು ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.. ಧಾರವಾಡ ನಗರದ ಹೊಸ ಬಸ್ ನಿಲ್ದಾಣದಲ್ಲಿ ಇಂದು ಬೆಳಗಿನ  ಜಾವ ಸಿಕ್ಕ ಬೆಲೆಬಾಳುವ ಮೊಬೈಲ್ ಸೆಟ್‍ನ್ನು ಸುರಕ್ಷಿತವಾಗಿ ಅದರ ವಾರಸುದಾರರಿಗೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಇಂದು ಬೆಳಿಗ್ಗೆ ರಾಹುಲ್ ಎಂ. ಬಸಟ್ಟಿ  ಎಂಬುವರ ಮೊಬೈಲ್ ಕಳೆದಿತ್ತು. ಈ ಕುರಿತು ಅವರ ತಂದೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ನೀಡಿದರು. ನಿಲ್ದಾಣಾಧಿಕಾರಿ ಅದರಗುಂಚಿಯವರು ತಮಗೆ ಸಿಕ್ಕ ಮೊಬೈಲ್‍ನ್ನು ಸಂಬಂಧಿಸಿದ ವ್ಯಕ್ತಿಗೆ ಹಿಂದಿರುಗಿಸಿದರು. ಈ ಸಂದರ್ಭದಲ್ಲಿ ವಿಭಾಗದ ಉಪಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಶಶಿಧರ ಕುಂಬಾರ ಉಪಸ್ಥಿತರಿದ್ದರು

Previous ಕಿಚ್ಚ ಸುದೀಪ್ ಹುಟ್ಟುಹಬ್ಬ- ಚಿತ್ರ ಮಂದಿರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ
Next ಬಳ್ಳಾರಿಯಲ್ಲಿಂದು ಹೊಸದಾಗಿ 444 ಕೊರೊನಾ ಪಾಸಿಟಿವ್ ಕೇಸ್ ಗಳು‌ ಪತ್ತೆ

You might also like

0 Comments

No Comments Yet!

You can be first to comment this post!

Leave a Reply