ರೈತ ಕುಟುಂಬಕ್ಕೆ ವಿಧಾನ ಪರಿಷತ್ ಸದಸ್ಯ.

ರೈತ ಕುಟುಂಬಕ್ಕೆ ವಿಧಾನ ಪರಿಷತ್ ಸದಸ್ಯ.

ಹಾಸನ,ಏ.18

ಕೊರೋನಾ ವೈರಸ್ ನಿಂದಾಗಿ ದೇಶದ ಪ್ರಿತಿಯೊಬ್ಬರ ಬದುಕಲ್ಲಿ ಸಂಕಷ್ಟ ತಂದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಡದಹಳ್ಳಿ ಗ್ರಾಮದಲ್ಲಿ ರೈತ ನಂಜೇಗೌಡರ ಪುತ್ರ ಸಂತೋಷ್ ಕುರಿ ಮೇಕೆ ಖರೀದಿಸಲು ಹೋಗಿ ಲಾಕ್ ಡೌನ್ ನಿಂದ ಗ್ರಾಮಕ್ಕೆ ಹಿಂತಿರುಗಲು ಸಾಧ್ಯವಾಗಿಲ್ಲ. ಹೀಗಾಗಿ  ಗ್ರಾಮದಲ್ಲಿ ಇರುವ ಕುರಿ ಮೇಕೆಗೆ ಮೇವಿನ ಕೊರತೆ ಯಾಗಿದೆ, ಕಳೆದ ಹಲಾವಾರು ದಿನಗಳಿಂದ ಹಸಿವಿನಿಂದ ಕರುಗಳು ಬಳಲಿವೆ ಹೀಗಾಗಿ ವಿಧಾನ ಪರಿಷತ್ ಸದಸ್ಯರಾದ ಗೋಪಾಲಸ್ವಾಮಿ ಅವರು ಸಹಾಯ ಹಸ್ತ ಜಾಜಿದ್ದು ,ನಂಜೇಗೌಡ ಅವರ ಕುರಿ ಮೇಕೆಗಳಿಗೆ ಒಂದು ಟ್ರಾಕ್ಟರ್ ಜೋಳದ ಮೇವು ಒದಗಿಸಿದ್ದಾರೆ.

ಅಲ್ಲದೇ ಸಂತೋಷ್ ಗ್ರಾಮಕ್ಕೆ ಹಿಂತಿರುಗುವ ವರೆಗೆ ಕುರಿ ಮೇಕೆ ಮೇವಿನ ಜವಾಬ್ದಾರಿಯನ್ನು ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿಯವರು ವಹಿಸಿಕೊಂಡಿದ್ದು ಅವರ ಕುಟುಂಬವನ್ನು ದತ್ತು ತೆಗೆದುಕೊಂಡಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ,ನಂಜೇಗೌಡರ ಜಮೀನನ್ನು ಸ್ವತಹ ನೇಗಿಲು ಹಿಡಿದು ಮೇವಿನ ಬಿತ್ತನೆ ಕೂಡ ಮಾಡಿ ಆ ಬಡ ರೈತನ ಕುಂಟುಂಬಕ್ಕೆ ಸಹಾಯ ಮಾಡಿದ್ದಾರೆ.

Previous ಎರಡು ವಿಶ್ವವಿದ್ಯಾಲಯಗಳ ವಸತಿ ನಿಲಯಗಳನ್ನು ಕೊರೊಂಟೈನ್ ಸೆಂಟರ್.
Next 45ಸಾವಿರ ಕುಟುಂಬಗಳಿಗೆ ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ದಾನಿಗಳಿಂದ ರೇಷನ್ ಕಿಟ್ ವಿತರಣೆ.

You might also like

0 Comments

No Comments Yet!

You can be first to comment this post!

Leave a Reply