ಬಿಂಡಿಗ ದೇವಿರಮ್ಮ ದೇವಾಲಯದ ಅಭಿವೃದ್ಧಿಗೆ ಅನುದಾನ ನೀಡಿದ ಸಚಿವ

ಬಿಂಡಿಗ ದೇವಿರಮ್ಮ ದೇವಾಲಯದ ಅಭಿವೃದ್ಧಿಗೆ ಅನುದಾನ ನೀಡಿದ ಸಚಿವ

ಚಿಕ್ಕಮಗಳೂರು-

 ಮಲ್ಲೇನಹಳ್ಳಿ ಬಿಂಡಿಗದ ದೇವಿರಮ್ಮ ದೇವಾಲಯದ ಸುತ್ತಮುತ್ತ ರಸ್ತೆ, ಮೆಟ್ಟಿಲು, ದೇವಿರಮ್ಮ ಬೆಟ್ಟದ ರಸ್ತೆ ನಿರ್ಮಾಣ ಒಳಗೊಂಡು ರೂ. ೬ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೆಲಸಗಳು ಆರಂಭವಾಗಲಿವೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದರು.

 ಅವರು ಇಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಮಲ್ಲೇನಹಳ್ಳಿ, ತೊಗರಿಹಂಕಲ್, ದಾಸರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರೂ. ೧೭.೫೦ ಕೋಟಿ ವೆಚ್ಚದ ವಿವಿಧ ಯೋಜನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡ ಸಿ.ಸಿ ರಸ್ತೆಗಳನ್ನು ಉದ್ಘಾಟಿಸಿ ಮಾತನಾಡಿದರು.

 ಚಿಕ್ಕಮಗಳೂರು ತಾಲ್ಲೂಕು ಮಲ್ಲೇನಹಳ್ಳಿಯಿಂದ ಬಿಂಡಿಗದ ದೇವಿರಮ್ಮ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಸಿ.ಸಿ ರಸ್ತೆ, ಮೆಟ್ಟಿಲು ನಿರ್ಮಾಣ, ರಕ್ಷಣಾ ರೇಲಿಂಗ್ಸ್ ಅಳವಡಿಕೆ ಹಾಗೂ ಸಂಪರ್ಕ ರಸ್ತೆ ಡಾಂಬರೀಕರಣ, ಜೊತೆಗೆ ದೇವಿರಮ ಬೆಟ್ಟದ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಒಟ್ಟು ೬ ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೆಲಸಗಳು ಆರಂಭವಾಗಲಿವೆ.

 ವಿರೂಪಾಕ್ಷೇಶ್ವರ ದೇವಾಲಯದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಪುರಾತನ ದೇವಾಲಯಗಳ ಸಂರಕ್ಷಣೆ ಹಾಗೂ ಜೀರ್ಣೋದ್ದಾರ ನಮ್ಮ ಮುಖ್ಯ ಉದ್ದೇಶವಾಗಿದೆ ಅದಕ್ಕೆ ಜನತೆಯ ಸಹಭಾಗಿತ್ವ ಅವಶ್ಯಕವಾಗಿದೆ ಎಂದ ಅವರು ಇದಕ್ಕಾಗಿ ಸರ್ಕಾರವು ಸಂರಕ್ಷಣಾ ಎಂಬ ನೂತನ ಯೋಜನೆ ರೂಪಿಸಲಾಗಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಧರ್ಮೋತ್ತಾನ ಟ್ರಸ್ಟ್ ಕೂಡ   ಜೀರ್ಣೋದ್ದಾರಕ್ಕಾಗಿ ಕೈಜೋಡಿಸಲಿದೆ ಪುರಾತನ ದೇವಾಲಯಗಳ ಸಂಕರಕ್ಷಣೆ ಮಾಡಿದ್ದಲ್ಲಿ ಮುಂದಿನ  ಪೀಳಿಗೆಗೆ ಕೊಡುಗೆ ನೀಡಿದಂತಾಗುವುದು ಎಂದು ಹೇಳಿದ್ದಾರೆ.

Previous ಸೆ.9 ರಿಂದ‌ 11ರ ವರೆಗೆ ಟ್ರೇಡ್ ಲೈಸೆನ್ಸ್ ಕ್ಯಾಂಪ್
Next ನಾಳೆಯಿಂದ ಅಂತರಾಜ್ಯ ಸಂಚಾರ ಆರಂಭ

You might also like

0 Comments

No Comments Yet!

You can be first to comment this post!

Leave a Reply