ಆಹಾರ ಪದಾರ್ಥಗಳನ್ನು ಸದುಪಯೋಗಪಡಿಸಿಕೊಳ್ಳಿ: ಜನರಿಗೆ ಪಡಿತರ ಹಂಚಿದ ಸಚಿವ  ಸಚಿವ ಸಿ.ಟಿ ರವಿ.

ಆಹಾರ ಪದಾರ್ಥಗಳನ್ನು ಸದುಪಯೋಗಪಡಿಸಿಕೊಳ್ಳಿ: ಜನರಿಗೆ ಪಡಿತರ ಹಂಚಿದ ಸಚಿವ ಸಚಿವ ಸಿ.ಟಿ ರವಿ.

ಚಿಕ್ಕಮಗಳೂರು, ಏ, ೦೪

ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಜನತೆಗೆ ಯಾವುದೇ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಹಲವು ಸಂಘ ಸಂಸ್ಥೆಗಳು, ದಾನಿಗಳು, ನಿತ್ಯ ಬಳಸುವ ದಿನಸಿ ಆಹಾರ ಪದಾರ್ಥಗಳು ಹಾಗೂ ಉಚಿತ ಹಾಲು ವಿತರಣೆ ಮಾಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಸಚಿವ ಸಿ.ಟಿ ರವಿ ಅವರು ಹೇಳಿದ್ದಾರೆ. ನಗರದ ಕೆಂಪನಹಳ್ಳಿ ಕಾಲೋನಿ, ಚಂದ್ರನಗರ, ರಾಮನಹಳ್ಳಿ ಕಾಲೋನಿ, ಹಾಗೂ ಉಪ್ಪಳ್ಳಿಯಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಆಯೋಜಿಸಿದ ಸುಮಾರು ೫೦೦ ಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿದ ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ  ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು.

    ಕೊರೋನಾ ವೈರಸ್ ತಡೆಗಟ್ಟುವ ಸಲುವಾಗಿ  ದೇಶದ್ಯಾಂತ ಲಾಕ್‌ಡೌನ್ ಮಾಡಲಾಗಿದ್ದು  ಜಿಲ್ಲೆಯ ಜನತೆಗೆ ನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದ್ದು  ಸೇವಾ ಭಾರತಿ, ಜಿಲ್ಲಾ ಬ್ರಾಹ್ಮಣ ಮಹಾ ಸಭಾ, ಸ್ಥಳೀಯ ಮುಖಂಡರು, ದಾನಿಗಳು ಸೇರಿದಂತೆ ಹಲವು ಸ್ಥಳೀಯ ಸಂಘ-ಸಂಸ್ಥೆಗಳು ಸ್ವ ಇಚ್ಚೆಯಿಂದ ಗೋಧಿ ಹಿಟ್ಟು, ಬೇಳೆ,  ಅಡುಗೆ ಎಣ್ಣೆ, ಉಪ್ಪು  ಸೇರಿದಂತೆ ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ ಎಂದರು..

Previous ಜನರಿಗೆ ಪಡಿತರ ಹಂಚಿದ ಶಾಸಕ.
Next ಕಾನೂನು ಸುವ್ಯವಸ್ಥೆ; ಸೂಕ್ತ ಕ್ರಮಕ್ಕೆ ಸಚಿವ ಜಗದೀಶ್ ಶೆಟ್ಟರ್ ಸೂಚನೆ.

You might also like

0 Comments

No Comments Yet!

You can be first to comment this post!

Leave a Reply