ಲಾಕ್ ಡೌನ್ ಸರಣಿ ರಜೆ: ಸೋವೇನಹಳ್ಳಿಯ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಮೂವರು ಕಾರ್ಮಿಕರು..!

ಲಾಕ್ ಡೌನ್ ಸರಣಿ ರಜೆ: ಸೋವೇನಹಳ್ಳಿಯ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಮೂವರು ಕಾರ್ಮಿಕರು..!

ಬಳ್ಳಾರಿ –

ಲಾಕ್ ಡೌನ್ ಹಿನ್ನಲೆಯಲ್ಲಿ ಸರಣಿ ರಜೆ ಇರೋದರಿಂದ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸೋವೇನಹಳ್ಳಿಯ ಗ್ರಾಮ ಹೊರ ವಲಯದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿಂದು ಮಧ್ಯಾಹ್ನ ಈಜಾಡಲು ಹೋಗಿದ್ದ ಮೂವರು ಕಾರ್ಮಿಕರು ಕೊಚ್ಚಿ ಹೋದ ಘಟನೆಯೊಂದು ನಡೆದಿದೆ. ಜಿಲ್ಲೆಯ ಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಮಾರ್ಗವಾಗಿ ಹರಿಯುವ ತುಂಗಭದ್ರಾ ಜಲಾಶಯದ ನದಿಯಲ್ಲಿ ಈಜಾಡಲು ಐದುಮಂದಿ ತೆರಳಿದ್ದು, ಆ ಪೈಕಿ ಮೂವರು ನೀರು ಪಾಲಾದ್ರೆ, ಇನ್ನಿಬ್ಬರು ನೀರಿಂದ ಪಾರಾಗಿದ್ದಾರೆ.

ಸೋವೇನಹಳ್ಳಿ ಗ್ರಾಮದ ನಿವಾಸಿ ಕೋಗಳಿ ಮಾರುತಿ (23) ಮಲ್ಲಿನಕೆರೆ ಸುರೇಶ (25) ಹಾಗೂ ಹಂಪಸಾಗರ ಗ್ರಾಮದ ಪಿ.ಫಕರುದ್ದೀನ್ (25) ಎಂಬುವರು ನೀರು ಪಾಲಾಗಿದ್ದಾರೆಂದು ಗುರುತಿಸಲಾಗಿದೆ. ಮಲ್ಲಿನಕೆರೆ ಸುರೇಶ ಎಂಬಾತನು ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ದಿನಗೂಲಿ ನೌಕರರಾಗಿದ್ದರೆಂದು ಗುರುತಿ ಸಲಾಗಿದೆ. ಉಳಿದ ಇಬ್ಬರು ಕೂಲಿಕಾರ್ಮಿಕರಾಗಿದ್ದಾರೆ‌. ನೀರು ಪಾಲಾದ ಮೃತದೇಹಗಳ ಪತ್ತೆಗೆ ಹಡಗಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ಕುರಿತು ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous ವಿಶ್ವದ ದೊಡ್ಡಣ್ಣ ಅಮೇರಿಕಾ…?
Next 2 ರೂ. ಮುಖಬೆಲೆಯ ಮೆಂತೋಪ್ಲಸ್ ಡಬ್ಬಿ ಪುಟ್ಟ ಮಗುವಿನ ಪ್ರಾಣ ತೆಗೆದಿದೆ.

You might also like

0 Comments

No Comments Yet!

You can be first to comment this post!

Leave a Reply