ಬೆಂಗಳೂರಿನಿಂದ ಕಾಲ್ನಡಿಗೆ ಹೊರಟ ಜೀವ ಸಾವು.

ಬೆಂಗಳೂರಿನಿಂದ ಕಾಲ್ನಡಿಗೆ ಹೊರಟ ಜೀವ ಸಾವು.

ಬಳ್ಳಾರಿ

ಕೊರೊನಾ ವೈರಸ್ ಎಫೆಕ್ಟ್​ನಿಂದ ದೇಶಾದ್ಯಂತ ಲಾಕ್​ಡೌನ್ ಆದ ಹಿನ್ನೆಲೆಯಲ್ಲಿ ಬೆಂಗಳೂರಿಂದ ಕಾಲ್ನಡಿಗೆಯಲ್ಲಿ ಬಂದ ಮಹಿಳೆಯೋರ್ವಳು ಸಕಾಲಕ್ಕೆ ಊಟ, ನೀರು ಸಿಗದೆ ಸಾವನ್ನಪ್ಪಿದ್ದಾಳೆ.
ಸಿಂಧನೂರಿನ ವೆಂಕಟೇಶ್ವರ ನಗರದ ನಿವಾಸಿ ಗಂಗಮ್ಮ (27) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಮಾರ್ಚ್ 30ರಂದು ಬೆಂಗಳೂರಿನಿಂದ ಗುಳೆ ಹೊರಟಿದ್ದರು. ಏಪ್ರಿಲ್ 4ರಂದು ಬಳ್ಳಾರಿ ತಲುಪಿದ್ದರು. ಎಸ್ಸಿ-ಎಸ್ಟಿ ನಿರಾಶ್ರಿತರ ಕೇಂದ್ರದಲ್ಲಿ ವಾಸವಾಗಿದ್ದರು. ಮಾರನೇ ದಿನದಿಂದ ಮಹಿಳೆ ಅಸ್ವಸ್ಥಳಾಗಿದ್ದಳು ಎನ್ನಲಾಗುತ್ತಿದೆ.
ಇನ್ನೇನು ಸಿಂಧನೂರಿನವರೆಗೆ ಕಾಲ್ನಡಿಗೆಯಲ್ಲೇ ತೆರಳಬೇಕು ಎನ್ನುವಷ್ಟರಲ್ಲಿ ಗಂಗಮ್ಮ ದಾರಿಯುದ್ದಕ್ಕೂ ಅನ್ನ, ನೀರಿಲ್ಲದೇ ತೀವ್ರ ಅಸ್ವಸ್ಥಳಾಗಿದ್ದಳು. ಆಕೆಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಗಂಗಮ್ಮನಿಗೆ ಒಂದೂವರೆ ವರ್ಷದ ಮಗುವಿದೆ. ಸಮಯಕ್ಕೆ ಊಟ ಸಿಗದ ಕಾರಣ ರಕ್ತ ಕಡಿಮೆಯಾಗಿ, ಕಿಡ್ನಿ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿದ್ದಾಳೆಂದು ವಿಮ್ಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್​ ಅವರು, ಮೃತ ಗಂಗಮ್ಮನಿಗೆ ಆಹಾರ ಇತ್ಯಾದಿಗಳನ್ನು ನೀಡಲಾಗಿಲ್ಲ ಎಂದು ಕೆಲವು ತಪ್ಪು ಮಾಹಿತಿ ನೀಡಲಾಗುತ್ತಿದೆ. ಆದರೆ, ಅವಳಿಗೆ ಹಣ್ಣು ಮತ್ತು ಆಹಾರವನ್ನು ನೀಡಲಾಗಿತ್ತು. ಅವಳ ಆರೋಗ್ಯದಲ್ಲಿ ಇತರ ಸಮಸ್ಯೆಗಳೂ ಇದ್ದವು, ತೀವ್ರ ಏರಿಳಿತ ಕಂಡುಬಂದ ಹಿನ್ನೆಲೆ ಏ. 2ರಂದು ವಿಮ್ಸ್​ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ದುಃಖಕರವೆಂದರೆ ಅವಳ ಆರೋಗ್ಯದ ಸ್ಥಿತಿ ಸುಧಾರಿಸದೆ ತೀರಿಕೊಂಡಳು ಎಂದು ತಿಳಿಸಿದ್ದಾರೆ.

Previous ಆನ್ಲೈನ್ , ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿ.
Next ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ.

You might also like

0 Comments

No Comments Yet!

You can be first to comment this post!

Leave a Reply