ನಿಗದಿಪಡಿಸಿದ ದಿನಾಂಕಗಳಲ್ಲೇ ಹಂಪಿ ಉತ್ಸವ ಆಚರಿಸಲು ಕರ್ನಾಟಕ ಜನಸೈನ್ಯದಿಂದ ಪ್ರತಿಭಟನೆ

ನಿಗದಿಪಡಿಸಿದ ದಿನಾಂಕಗಳಲ್ಲೇ ಹಂಪಿ ಉತ್ಸವ ಆಚರಿಸಲು ಕರ್ನಾಟಕ ಜನಸೈನ್ಯದಿಂದ ಪ್ರತಿಭಟನೆ

ಬಳ್ಳಾರಿ-

 ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಪ್ರತಿವರ್ಷವೂ ಆಚರಿಸಿಕೊಂಡು ಬರುತ್ತಿರುವ ಹಂಪಿ ಉತ್ಸವವನ್ನು ಈ ವರ್ಷವೂ ಸಹ ಮೂರು ದಿನಗಳ ಕಾಲ ನವೆಂಬರ್ ೩, ೪ ಮತ್ತು ೫ ರಂದು ಕಡ್ಡಾಯವಾಗಿ ಆಚರಿವಂತೆ ಪ್ರತಿಭಟನೆ ಮಾಡಲಾಯಿತು. ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರ್ನಾಟಕ ಜನಸೈನ್ಯ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ರಯ. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಜನಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ. ಎರಿಸ್ವಾಮಿ ಅವರು, ಮಹಮ್ಮಾರಿ ಕೊರೊನಾ ಇಡೀ ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಅದರಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ನಿರ್ಲಕ್ಷ್ಯ ಮಾಡದೇ ಕಡ್ಡಾಯವಾಗಿ ಮೂರು ದಿನಗಳ ಕಾಲ ಆಚರಿಸಬೇಕು. ರಾಜ್ಯದ ಪ್ತತಿಷ್ಠಿತ ಉತ್ಸವಗಳಾದ ಮೈಸೂರು ದಸರಾ ಕೋವಿಡ್ ಸಂದರ್ಭದಲ್ಲೂ ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಂತೆಯೇ ಹಂಪಿ ಉತ್ಸವವನ್ನು ಕೂಡ ಕಡ್ಡಾಯವಾಗಿ ಮೂರು ದಿನಗಳ ಆಚರಿಸಬೇಕೆಂದು ಒತ್ತಾಯಿಸಿದರು.

 ೨೦೨೦ನೇ ಸಾಲಿನ ಹಂಪಿ ಉತ್ಸವವನ್ನು ಸರ್ಕಾರ ಕುಂಟು ನೆಪವೊಡ್ಡಿ ಮುಂದೂಡುವುದು ಸರಿಯಲ್ಲ. ಹಂಪಿ ಉತ್ಸವಕ್ಕಾಗಿ ಇಲ್ಲಿಯವರೆಗೂ ರಾಜ್ಯ ಸರ್ಕಾರದಿಂದ ಮತ್ತು ಜಿಲ್ಲಾಡಳಿತದಿಂದ ಯಾವುದೇ ಪೂರ್ವಭಾವಿ ಸಭೆಗಳನ್ನು ಹಮ್ಮಿಕೊಂಡಿಲ್ಲ. ಇದು ಈ ಭಾಗದ ಜನತೆಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಐತಿಹಾಸಿಕ ಬಹುದೊಡ್ಡ ಸಾಂಸ್ಕೃತಿಕ ಚಟುವಟಿಕೆಗಳಿಗೆ ತಡೆಯೊಡ್ಡುತ್ತಿರುವುದು ಎಷ್ಟು ಸರಿ..? ರಾಜ್ಯ ಸರ್ಕಾರ ದಸರಾ ಉತ್ಸವಕ್ಕೆ ತೋರಿದ ಆಸಕ್ತಿ ಹಂಪಿ ಉತ್ಸವಕ್ಕೆ ಯಾಕೆ ತೋರಿಸುತ್ತಿಲ್ಲ..? ಬಳ್ಳಾರಿ ಜಿಲ್ಲೆ ಉತ್ತರ ಕರ್ನಾಟಕ ಭಾಗಕ್ಕೆ ಸೇರಿದೆ ಎಂಬ ಕಾರಣಕ್ಕೆ ಈ ರೀತಿಯ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ.. ? ಎಂದು ಪ್ರಶ್ನಿಸಿದರು. ಹಂಪಿ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿಕೊಂಡಿದೆ ಐತಿಹಾಸಿಕ ಹಿನ್ನೆಲೆ ಹಂಪಿ ವೀಕ್ಷಣೆಗೆ ದೇಶ-ವಿದೇಶದಿಂದ ಪ್ರತಿವರ್ಷವೂ ಲಕ್ಷಾಂತರ ಜನ ಪ್ರವಾಸಿಗರು ಬರುತ್ತಾರೆ. ಇಷ್ಟೆಲ್ಲ ಮಹತ್ವವಿರುವ ಹಂಪಿಯ ಬಗ್ಗೆ ಅಸಡ್ಡೆ ತೋರುವುದು ಸರಿಯಲ್ಲ ಎಂದರು.

Previous ಸೆ.28 ಕರ್ನಾಟಕ ಬಂದ್
Next ಮಾಸ್ಕ್ ಧರಿಸಿ ಪರೀಕ್ಷೆ ಪರೀಕ್ಷೆ ಬರೆಯಲು ಬಂದ ನಕಲಿ ವಿದ್ಯಾರ್ಥಿ

You might also like

0 Comments

No Comments Yet!

You can be first to comment this post!

Leave a Reply