ರಾಗಿಣಿ ದ್ವಿವೇದಿಗೆ ಕಂಟಕ.

ರಾಗಿಣಿ ದ್ವಿವೇದಿಗೆ ಕಂಟಕ.

ಬೆಂಗಳೂರು-  

 ಇಂದ್ರಜೀತ್ ಲಂಕೇಶ್ ವಿಚಾರಣೆ ಬಳಿಕ ತುಪ್ಪದ ಬೆಡಗಿ ರಾಗಿಣಿ ಅವರಿಗೆ ಕಂಟಕ ಎದುರಾಗಿದ. ಕಳೆದ ರಡು ದಿನಗಳ ಹಿಂದೆ ವಿಚಾರಣೆಗೆ ಹಾಜರಾಗಿದ್ದ ಲಂಕೇಶ್ ಅವರು ಕೆಲ ಸಿನಿಮಾ ಮಂದಿಯ ಹೆಸರನ್ನ ಸಿಸಿಬಿ ಅಧಿಕಾರಿಗಳ ಮುಂದೆ ಬಹಿರಂಗ ಪಡಿಸಿದ್ದಾರೆ. ಇದೆ ಕಾರಣಕ್ಕಾಗಿ ತುಪ್ಪದ ಬೇಡಗಿ ರಾಗಿಣಿಗೆ ಕಂಟಕ ಎದುರಾಗಿದೆ.

 ಇಂದ್ರಜೀತ್ ಲಂಕೇಶ್ ಹೇಳಿಕೆಯ ಬಳಿಕ ಸ್ಯಾಂಡಲ್​​ವುಡ್​​ನಲ್ಲಿ ಡ್ರಗ್ಸ್​​ ಘಾಟು ಹೆಚ್ಚಾಗಿದೆ.  ಇದರ ಬೇನ್ನಲೇ ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಪೊಲೀಸರು ಬುಲಾವ್ ನೀಡಿದ್ದಾರೆ.‌ ಚಾಮರಾಜಪೇಟೆ ಬಳಿ‌ಯಿರುವ ಸಿಸಿಬಿ‌ ಕಚೇರಿಗೆ ರಾಗಿಣಿ‌ ತೆರಳಿ ವಿಚಾರಣೆಗೆ ಹಾಜರಾಗುವ ಅನಿರ್ವಾತೆ ಎದುರಾಗಿದೆ.

 ಅಲ್ಲದೆ‌ ರಾಗಿಣಿ ಆಪ್ತ ರವಿಶಂಕರ್ ಅವರನ್ನ ‌ಇಗಾಗಲೇ ವಶಕ್ಕೆ ಪಡೆದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಹೀಗಾಗಿ  ರವಿಶಂಕರ್ ವಿಚಾರಣೆ ಬಳಿಕ ರಾಗಿಣಿಗೆ ನೋಟಿಸ್ ‌ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್, ಈಗಾಗಲೇ ಸುಮಾರು 15 ಜನ ನಟ ನಟಿಯರ ಹೆಸರನ್ನು ಕೊಟ್ಟಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

 ಅದರಲ್ಲಿ ಸ್ಯಾಂಡಲ್​​ವುಡ್ ನ್ ಕೆಲವು ನಟ ನಟಿಯರು ಹಾಗು ಸೀರಿಯಲನ್ ನಟಿಯರು ಸೇರಿದ್ದಾರೆ ಎನ್ನಲಾಗುತ್ತಿದೆ. ಆದರೆ ಸದ್ಯ ರಾಗಿಣಿ ಅವರಿಗೆ ನೋಟಿಸ್ ಜಾರಿ ಮಾಡಿದ ಹಿನ್ನಲೆ ಸ್ಯಾಂಡಲ್​​ವುಡ್ನಲ್ಲಿ ಡ್ರಗ್ಸ್  ಘಾಟು ಮತ್ತಷ್ಟು ಹೆಚ್ಚಾಗಿದೆ. ಇನ್ನು ಇಂದ್ರಜೀತ್ ಲಂಕೇಶ್ ಅವರು ಡ್ರಗ್ಸ ಮಾಫಿಯಾ ವಿಚಾರದಲ್ಲಿ ಯುಟರ್ನ್ ಹೊಡೆದಿಲ್ಲ ಎನ್ನುವುದಕ್ಕೆ ಇದೊಂದು ಸಾಕ್ಷಿ ಸಾಕು. ಇದೆ  ವಿಚಾರಕ್ಕೆ ರಾಗಿಣಿ ಅವರಿಗೆ ನೋಟಿಸ್ ನೀಡಿರಬಹುದು ಎನ್ನುವ ಅನುಮಾನಗಳು ಕಾಡುತ್ತಿವೆ.

Previous ಬಳ್ಳಾರಿಯ ನೂತನ ಎಸ್ಪಿಯಾಗಿ ಸೈದುಲ್ಲಾ ಅದಾವತ್ ಅಧಿಕಾರ ಸ್ವೀಕಾರ.
Next ಧಾರವಾಡ ಪೇಡಾ ಸವಿದ ನಿತನ್ ಗಡ್ಕರಿ

You might also like

0 Comments

No Comments Yet!

You can be first to comment this post!

Leave a Reply