ಕೊರೊನಾ ಹೋರಾಟಕ್ಕೆ ಕೈ ಜೋಡಿಸಿ:ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಮನವಿ.

ಕೊರೊನಾ ಹೋರಾಟಕ್ಕೆ ಕೈ ಜೋಡಿಸಿ:ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಮನವಿ.

ಹಾಸನ ಮಾ 31.

ಕೊರೊನಾ ‌ ಸೋಂಕು ನಿಯಂತ್ರಣ ಹಾಗೂ ಚಿಕಿತ್ಸಾ ಸನ್ನದ್ದತೆ ಕುರಿತಂತೆ ಜಿಲ್ಲಾಧಿಕಾರಿ ಆರ್ .ಗಿರೀಶ್ ಅವರು ಇಂದು ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ವೈದ್ಯರೊಂದಿಗೆ ಸಭೆ ನಡೆಸಿ ಸಂಪೂರ್ಣ ಸಹಕಾರ ಕೋರಿದರು. ಇದೊಂದು ‌ಆರೋಗ್ಯ ತುರ್ತು ಪರಿಸ್ಥಿತಿ, ಎಲ್ಲರೂ ಒಂದಾಗಿ‌ ಕೋವಿಡ್ 19 ವಿರುದ್ದ ಹೋರಾಟ ನಡೆಸಬೇಕಿದೆ. ಇದಕ್ಕೆ ಎಲ್ಲಾ  ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಸಹಕಾರ ಅತೀ ಅಮೂಲ್ಯವಾದದ್ದು ಎಂದು ಜಿಲ್ಲಾಧಿಕಾರಿ ಹೇಳಿದರು.

  ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿ ವರ್ತಿಸಲಾಗಿದೆ. ಹಾಗಾಗಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಒ.ಪಿ‌.ಡಿ ಪ್ರಾರಂಭಿಸಬೇಕು.ಹೊರ ರೋಗಿಗಳ ತಪಾಸಣೆ ಪ್ರಾರಂಭ ಆಗಬೇಕು ಎಂದು ತಿಳಿಸಿದರು . ಜಿಲ್ಲೆಯಲ್ಲಿ ಇರುವ ಎಲ್ಲಾ 52 ಖಾಸಗಿ ‌ನರ್ಸಿಂಗ್  ಹೋಂಗಳು ಕನಿಷ್ಠ ಕೊರೊನಾ ‌ಮಹಾಮಾರಿ ತೊಲಗುವ ವರೆಗಾದರೂ ಸುವರ್ಣ ಆರೋಗ್ಯ ಟ್ರಸ್ಟ್ ನಲ್ಲಿ ನೊಂದಾಯಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಅವರು ಕೋರಿದರು. ನಗರದ ತಣ್ಣೀರುಹಳ್ಳ ದಲ್ಲಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಆಯುರ್ವೇದ ಆಸ್ಪತ್ರೆಯನ್ನು ಅಗತ್ಯ ಬಿದ್ದರೆ  ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಕಾಯ್ದುರಿಸಿಕೊಳ್ಳಲಾಗಿದೆ.ಇದೇ ರೀತಿ ಖಾಸಗಿ‌ ಆಸ್ಪತ್ರೆಗಳ ಅಗತ್ಯ ಕೂಡ ಬರಬಹುದು ಆಗ ಜಿಲ್ಲಾಡಳಿತಕ್ಕೆ ಬಿಟ್ಟು ಕೊಡಲು ಅಥವಾ ಖಾಸಗಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಸಿದ್ದರಿರಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದರು.

Previous ಕೊರೋನಾದಿಂದ ಮೃತರಾದ ಕಲಬುರಗಿ ವಯೋವೃದ್ಧನ ಮಗಳು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ.
Next ಖಾಸಗಿ ಕ್ಲಿನಿಕ್ ತೆರೆಯದೆ ಇದ್ರೆ ವೈದ್ಯೆರ ಪರವಾನಿಗೆ ರದ್ದು:ಕೃಷಿ ಸಚಿವ ಬಿ.ಸಿ.ಪಾಟೀಲ

You might also like

0 Comments

No Comments Yet!

You can be first to comment this post!

Leave a Reply