ಬ್ಯಾಂಕ್ಗಳ ಎ.ಟಿ.ಎಮ್ ಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಕೆ.

ಬ್ಯಾಂಕ್ಗಳ ಎ.ಟಿ.ಎಮ್ ಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಕೆ.

ಧಾರವಾಡ ಏ.12. 

ಜಿಲ್ಲೆಯಲ್ಲಿ ಕೋವಿಡ್-19 ಕೊರೊನಾ ರೋಗ ಪತ್ತೆ ಹಚ್ಚುವಿಕೆ ಹಾಗೂ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಎಲ್ಲ ಬ್ಯಾಂಕ್‌ಗಳ ಎ.ಟಿ.ಎಮ್ ಗಳಲ್ಲಿ  ಆಗಮಿಸುವ ಹಾಗೂ ನಿರ್ಗಮಿಸುವ ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಥರ್ಮಲ್ ಸ್ಕ್ಯಾನರ್ ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಎಲ್ಲ ಬ್ಯಾಂಕ್ ಮ್ಯಾನೇಜರ್‌ಗಳಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದಾರೆ.

ಎ.ಟಿ.ಎಮ್ ಗಳಿಗೆ ಬರುವ ಗ್ರಾಹಕರ ಆರೋಗ್ಯವನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲು ಒಬ್ಬ ನುರಿತ ಸಿಬ್ಬಂದಿಯನ್ನು ನಿಯೋಜಿಸಬೇಕು. ಹಾಗೂ ಎಲ್ಲ ವಿವರಗಳನ್ನು ರಜಿಸ್ಟರ್‌ನಲ್ಲಿ ದಾಖಲಿಸಿಕೊಂಡು ಕಡ್ಡಾಯವಾಗಿ ಪ್ರತಿ ಬ್ಯಾಂಕ್‌ಗಳ ಎ.ಟಿ.ಎಮ್ ಗಳಲ್ಲಿ ಗ್ರಾಹಕರ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇವರಿಗೆ ಸಲ್ಲಿಸಲು ಅಗತ್ಯ ಕ್ರಮ ಜರುಗಿಸುಬೇಕೆಂದು ತಿಳಿಸಿದ್ದಾರೆ.

Previous ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದ ಕ್ವಾರೆಂಟೈನ್ ಕೇಂದ್ರದಿಂದ 101 ಜನರ ಬಿಡುಗಡೆ.
Next ಜಿಲ್ಲಾ ಆಸ್ಪತ್ರೆ ಎಸ್ಡಿಎಮ್ ಮತ್ತು ಡಿಮಾನ್ಸ್ ಗಳಲ್ಲಿ ಕೋವಿಡ್-19 ಪ್ರಯೋಗಾಲಯ.

You might also like

0 Comments

No Comments Yet!

You can be first to comment this post!

Leave a Reply