ಕೆಮ್ಮು, ಶೀತ, ಜ್ವರ ಮತ್ತು ಗಂಟಲುನೋವಿಗೆ ಮಾತ್ರೆ ಅಥವಾ ಸಿರಪ್ ಖರೀದಿಸಿದರೂ ಮಾಹಿತಿ ನೀಡಿ.

ಕೆಮ್ಮು, ಶೀತ, ಜ್ವರ ಮತ್ತು ಗಂಟಲುನೋವಿಗೆ ಮಾತ್ರೆ ಅಥವಾ ಸಿರಪ್ ಖರೀದಿಸಿದರೂ ಮಾಹಿತಿ ನೀಡಿ.

ದಾವಣಗೆರೆ ಏ.16

 ಸಾರ್ವಜನಿಕರು ವೈದ್ಯರ ಸಲಹಾ ಚೀಟಿ ಇಲ್ಲದೇ ಮೆಡಿಕಲ್ ಶಾಪ್‍ಗಳಿಗೆ ಬಂದು ಕೆಮ್ಮು, ಶೀತ, ಜ್ವರ ಮತ್ತು ಗಂಟಲುನೋವಿಗೆ ಮಾತ್ರೆ ಅಥವಾ ಸಿರಪ್ ಖರೀದಿಸಿದರೆ ಮೆಡಿಕಲ್ ಶಾಪ್‍ನವರು ಅಂತಹ ವ್ಯಕ್ತಿಗಳ ಮೊಬೈಲ್ ಸಂಖ್ಯೆ ತೆಗೆದುಕೊಂಡು ಜಿಲ್ಲಾಡಳಿತದ ಸಹಾಯವಾಣಿ 1077 ಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಕೋವಿಡ್ -19 ನಿಯಂತ್ರಣ ಹಿನ್ನೆಲೆ ಯಾವುದೇ ಶೀತ, ಕೆಮ್ಮು, ಜ್ವರದಂತಹ ಪ್ರಕರಣಗಳನ್ನು ಕಡ್ಡಾಯವಾಗಿ ತಾಲ್ಲೂಕು ಅಥವಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳಬೇಕು. ಈ ಆಸ್ಪತ್ರೆಗಳಲ್ಲಿ ಕೋವಿಡ್ 19 ಪರೀಕ್ಷೆಗೆ ಅವಕಾಶವಿದ್ದು, ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಆದ ಕಾರಣ ವೈದ್ಯರ ಸಲಹೆ ಇಲ್ಲದೇ ಸಾರ್ವಜನಿಕರು ಕೆಮ್ಮು, ಶೀತ, ಜ್ವರದಂತಹ ಪ್ರಕರಣಗಳಿಗೆ ಔಷಧಿ ತೆಗೆದುಕೊಂಡಲ್ಲಿ ತಕ್ಷಣವೇ ಅವರ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ಜಿಲ್ಲಾಡಳಿತ 1077 ಗೆ ಮಾಹಿತಿ ನೀಡಿದಲ್ಲಿ ಅಂತಹ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಲಾಕ್ಡೌನ್ ಮೀರಿ ಓಡಾಡಿದಲ್ಲಿ ಬಂಧನ

 ಲಾಕ್‍ಡೌನ್ ಆದೇಶ ಮೀರಿ ಇಂದು ನಗರದ ಕುಂದುವಾಡ ಕೆರೆ ಬಳಿ ವಾಕ್ ಮಾಡುತ್ತಿದ್ದ ಸುಮಾರು 15 ಜನರನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬಂಧಿಸಿ, ಸುಮಾರು 2 ರಿಂದ 3 ಗಂಟೆ ಠಾಣೆಯಲ್ಲಿರಿಸಿ ನಂತರ ಬಿಡುಗಡೆಗೊಳಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಲಾಕ್‍ಡೌನ್ ಆದೇಶ ಮೀರಿ ವಿನಾಕಾರಣ ಮನೆಯಿಂದ ಹೊರಗೆ ಬಂದು ಓಡಾಡಿದರೆ ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಎಸ್‍ಪಿ ಹನುಮಂತರಾಯ ತಿಳಿಸಿದ್ದಾರೆ.

Previous ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡಿದರೆ ಡ್ರೋನ್ ಮೂಲಕ ಸೆರೆ.
Next ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಘೋಷಿಸಿ ಆದೇಶ.

You might also like

0 Comments

No Comments Yet!

You can be first to comment this post!

Leave a Reply