ಭಾರತ ಕೋವಿಡ್ ಹಾಟ್ಸ್ಪಾಟ್ ಕೇಂದ್ರ ಆಗಬಹುದಿತ್ತು.

ಭಾರತ ಕೋವಿಡ್ ಹಾಟ್ಸ್ಪಾಟ್ ಕೇಂದ್ರ ಆಗಬಹುದಿತ್ತು.

ನವದೆಹಲಿ, ಏಪ್ರಿಲ್-17

ಭಾರತದ ಜನಸಂಖ್ಯೆಯ ಗಾತ್ರ ಗಮನಿಸಿದರೆ ಭಾರತವು ಜಾಗತಿಕವಾಗಿ ಕೋವಿಡ್​ ಹಾಟ್‌ಸ್ಪಾಟ್ ಕೇಂದ್ರ ಆಗಬಹುದಿತ್ತು. ಅಂತಹ ಯಾವುದೇ ಅಪಾಯಕ್ಕೆ ಅವಕಾಶ ಮಾಡಿಕೊಡಲಿಲ್ಲ. ದೇಶದ ಆರೋಗ್ಯ ವ್ಯವಸ್ಥೆಯು ಈ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಸ್ಪಂದಿಸಲು ಸರ್ಕಾರವು ದೊಡ್ಡ ಮಟ್ಟದ ಪ್ರಯತ್ನಗಳನ್ನು ಆರಂಭಿಕ ಹಂತದಲ್ಲಿ ಕೈಗೆತ್ತಿಕೊಂಡಿತ್ತು ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ..

 ಕೋವಿಡ್​-19ರ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಡವರು ಮತ್ತು ಕೈಗಾರಿಕೆಗಳಿಗೆ ನೆರವಾಗಲು ಶೀಘ್ರದಲ್ಲೇ ಹೊಸ ಪರಿಹಾರ ಕ್ರಮಗಳು ಹಾಗೂ ಆರ್ಥಿಕ ಉತ್ತೇಜನಗಳನ್ನು ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ

 ವಿಶ್ವ ಬ್ಯಾಂಕಿನ ಅಭಿವೃದ್ಧಿ ಸಮಿತಿಯ 101ನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸೀತಾರಾಮನ್, ಕೋವಿಡ್ -19ರ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ದೇಶಗಳಿಗೆ ಭಾರತವು ಔಷಧಗಳನ್ನು ಪೂರೈಸುತ್ತಲೇ ಇರುತ್ತದೆ ಎಂದು ಜಾಗತಿಕ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.

ಕಳೆದ ತಿಂಗಳು ಘೋಷಿಸಿದ 23 ಬಿಲಿಯನ್ ಡಾಲರ್​ ಆರ್ಥಿಕ ಪುನಶ್ಚೇತನದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಉಚಿತ ಆರೋಗ್ಯ ವಿಮೆ ಸೇರಿದಂತೆ ಬಡವರಿಗೆ ನಗದು ವರ್ಗಾವಣೆ, ಉಚಿತ ಆಹಾರ ಮತ್ತು ಅನಿಲ ವಿತರಣೆ, ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕ್ರಮಗಳಂತಹ ಜನಪರ ಪರಿಹಾರಗಳು ಒಳಗೊಂಡಿದ್ದವು ಎಂದಿದ್ದಾರೆ.

Previous ರೋಗಿಗೆ ನೆರವಾಗಿ ಮಾನವೀಯತೆ ಮೆರೆದ ಕಲಬುರಗಿ ಕೊರೋನಾ ವಾರಿಯರ್ಸ್.
Next ಚೀನಾದಲ್ಲಿ ಮತ್ತೆ ಹೊಸದಾಗಿ 46 ಕೋವಿಡ್ ಕೇಸ್ಗಳು.

You might also like

0 Comments

No Comments Yet!

You can be first to comment this post!

Leave a Reply