ವೈದ್ಯಕೀಯ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಉಭಯ ದೇಶಗಳ ಮನವಿ.

ವೈದ್ಯಕೀಯ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಉಭಯ ದೇಶಗಳ ಮನವಿ.

ನವದೆಹಲಿ

ಭಾರತ ಸೇರಿದಂತೆ ವಿಶ್ವವನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್​-19 ಹರಡುವಿಕೆ ತಡೆಯಲು ಅಗತ್ಯ ಔಷಧ ಮತ್ತು ಸಲಕರಣೆಗಳ ರಫ್ತು ಮತ್ತು ಆಮದು ವೈದ್ಯಕೀಯ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಪರಸ್ಪರ ಒಪ್ಪಿಗೆ ಸೂಚಿಸಿವೆ.

ಮಾರಣಾಂತಿಕ ವೈರಸ್ ಹರಡುವಿಕೆಗೆ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರೀಂಗ್ಲಾ ಮತ್ತು ರಷ್ಯಾದ ವಿದೇಶಾಂಗ ಸಚಿವ ಇಗೊರ್ ಮೊರ್ಗುಲೋವ್ ಅವರು ದೂರವಾಣಿ ಸಂಭಾಷಣೆ ನಡೆಸಿದ್ದಾರೆ.ಈ ಮೂಲಕ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಊಭಯ ದೇಶಗಳು ಮನವಿ ಮಾಡಿಕೊಂಡಿವೆ.

 ಎರಡೂ ದೇಶಗಳಲ್ಲಿ ಕೊರೊನಾ ವೈರಸ್​ ತಡೆಗೆ ನಡೆಯುತ್ತಿರುವ ಪ್ರಯತ್ನಗಳ ಕುರಿತು ಇಬ್ಬರೂ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.

ರಷ್ಯಾದಲ್ಲಿ 10,000ಕ್ಕೂ ಹೆಚ್ಚು ಕೊರೊನಾ ಸೋಂಕಿತರಿದ್ದು, 76 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ 186 ಮಂದಿ ಸಾವನ್ನಪ್ಪಿದ್ದು, 6,000 ಕ್ಕೂ ಹೆಚ್ಚು ಪೀಡಿತರಿದ್ದಾರೆ. ಭಾರತಕ್ಕೆ ಹೋಲಿಸಿದ್ರೆ ರಷ್ಯಾದಲ್ಲಿ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. 

ಇನ್ನು ಇದೇ ವೇಳೆಯಲ್ಲಿ ರಷ್ಯಾದಲ್ಲಿ 15,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಮತ್ತು ಭಾರತದಲ್ಲಿ 5,000 ರಷ್ಯಾದ ಪ್ರವಾಸಿಗರಿದ್ದಾರೆ. ರಷ್ಯಾದ ಪ್ರಜೆಗಳನ್ನು ಭಾರತದಿಂದ ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ರಷ್ಯಾ ಧನ್ಯವಾದ ಸಲ್ಲಿಸಿದೆ.

Previous ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಹರಿಯಾಣ ಸರ್ಕಾರ ಸಂಬಳವನ್ನು ದ್ವಿಗುಣ.
Next ಎಂದೇ ಕುಟುಂಬದ 9 ಜನರಲ್ಲಿ ಕೊರೋನಾ ವೈರಸ್ .ಹೆಚ್ಚಾದ ಜನರಲ್ಲಿ ಆತಂಕ.

You might also like

0 Comments

No Comments Yet!

You can be first to comment this post!

Leave a Reply