ಪಡಿತರ ವಿತರಣೆಯಲ್ಲಿ ಅಕ್ರಮ: 3 ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದು .

ಪಡಿತರ ವಿತರಣೆಯಲ್ಲಿ ಅಕ್ರಮ: 3 ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದು .

ಬೆಂಗಳೂರು ಏಪ್ರಿಲ್ 09

ಬೆಂಗಳೂರು ನಗರದಲ್ಲಿ ಪಡಿತರ ಆಹಾರ ವಿತರಣೆಯಲ್ಲಿ ಲೋಪ ಕಂಡುಬಂದಿದ್ದು, ಕರ್ನಾಟಕ  ರಾಜ್ಯ ಆಹಾರ ಆಯೋಗದಿಂದ ಅನಿರೀಕ್ಷಿತ ಭೇಟಿ ನೀಡಿ  ತಪಾಸಣೆ ನಡೆಸಿ ನಗರದ ಮೂರು ನ್ಯಾಯ ಬೆಲೆ ಅಂಗಡಿಗಳ ಪರವಾನಗಿಗಳನ್ನು ರದ್ದು ಪಡಿಸಲು ಸೂಚನೆ ನೀಡಲಾಗಿದೆ ಎಂದು ಕರ್ನಾಟಕ  ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಘೋಷಿಸಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ಮಾಹೆಯ ಪಡಿತರವನ್ನು ಒಮ್ಮೆಲೆ ನೀಡಲು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಡಿತರ ವಿತರಣೆ ಹಾಗೂ ದಾಸ್ತಾನು ಮಳಿಗೆಯಲ್ಲಿ ವ್ಯವಸ್ಥೆ ಬಗ್ಗೆ ತಪಾಸಣೆ ಕೈಗೊಳ್ಳಲಾಯಿತು ಎಂದು ಅವರು ಮಾಹಿತಿ ನೀಡಿದರು.

ನಿಗಧಿತ ಪ್ರಮಾಣಕ್ಕಿಂತ ಕಡಿಮೆ ಪಡಿತರ ವಿತರಣೆ ಮಾಡಿರುವ ಹಿನ್ನೆಲೆಯಲ್ಲಿ ಶಿವಾಜಿನಗರದ ಸತ್ಯ ಬಳಕೆದಾರರ ಸಹಕಾರ ಸಂಘ ನಡೆಸುತ್ತಿರುವ ಎಸ್.ಆರ್. 33 ಮತ್ತು  32 ಪಡಿತರ ವಿತರಣಾ ಕೇಂದ್ರಗಳು ಹಾಗೂ ಸ್ಯಾಪಿಂಗ್ ರಸ್ತೆಯಲ್ಲಿರುವ ಎಸ್.ಆರ್. 21 ಪಡಿತರ ವಿತರಣಾ ಕೇಂದ್ರಗಳನ್ನು ಮುಚ್ಚಿ ಅಮಾನತಿನಲ್ಲಿಡಲು ಆಹಾರ ಇಲಾಖೆಯ ಉಪನಿರ್ದೇಶಕರಾದ ನಾಗಭೂಷಣ್ ಅವರಿಗೆ ಸೂಚಿಸಿದ್ದಾರೆ.

Previous ಕೊರೋನಾ ಮಾಹಾರಿ ವಿರುದ್ದದ ಹೋರಾಟದಲ್ಲಿ ಉಳಿಯುವುದು ಎರಡೇ ಎರಡು ದೇಶ…?
Next ನಿಜ ಜೀವನದ ಹೀರೊಗಳಾಗಿರುವ ಇವರಿಗೆ ನನ್ನ ಹೋಟೆಲ್ ಬಾಗಿಲು ಸದಾ ತೆರೆದಿರುತ್ತದೆ. ತನ್ನ ಹೋಟೆಲ್ಬಿಟ್ಟು ಕೊಟ್ಟ ಸೋನು ಸೂದ್.

You might also like

0 Comments

No Comments Yet!

You can be first to comment this post!

Leave a Reply