ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಣೆ: ನಾಲ್ವರ ವಿರುದ್ದ ಪ್ರಕರಣ ದಾಖಲು.

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಣೆ: ನಾಲ್ವರ ವಿರುದ್ದ ಪ್ರಕರಣ ದಾಖಲು.

ರಾಯಚೂರು,ಎಪ್ರಿಲ್೦೩.

ಕೊರೋನಾ ಸೋಂಕು ಹಿನ್ನೆಲೆ ವಿದೇಶದಿಂದ ರಾಯಚೂರು ಜಿಲ್ಲೆಗೆ ಮರಳಿ ಬಂದಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಹಾಗೂ ತಾಲೂಕು ಆಡಳಿತಕ್ಕೆ ಮಾಹಿತಿ ನೀಡದೇ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ವೈಟಿಪಿಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಕುಟುಂಬಸ್ಥರ ವಿರುದ್ದ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್ ೧೪ ರಂದು ಶಕ್ತಿನಗರದ ಆರ್.ಟಿ.ಪಿ.ಎಸ್. ಕಾಲೋನಿ ನಿವಾಸಿಗಳಾದ ವೈ.ಟಿ.ಪಿ.ಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಆರ್. ಕಬಾಡೆ ಮತ್ತು ಆರ್.ಟಿ.ಪಿ.ಎಸ್ ಲೆಕ್ಕಾಧಿಕಾರಿ ಅನುಪಮಾ ಅವರ ಮನೆಗೆ ಎಸ್.ಆರ್. ಕಬಾಡೆ ಅವರ ಪುತ್ರರಾದ ಪ್ರೀತಂ ಕಬಾಡೆ ಹಾಗೂ ಅವರ ಗೆಳೆಯ ಡಾ. ಚಿನ್ಮಯಿ ಜರ್ಮನಿಯಿಂದ ದೆಹಲಿಗೆ, ದೆಹಲಿಯಿಂದ ಬೆಂಗಳೂರು ಮೂಲಕ ವಾಹನದಲ್ಲಿ ಶಕ್ತಿನಗರಕ್ಕೆ ಆಗಮಿಸಿ ವಾಸವಾಗಿದ್ದರು.

ಡಾ. ಚಿನ್ಮಯಿ ಇವರಿಗೆ ಮಾರ್ಚ್ ೧೪ ರಿಂದ ಮಾರ್ಚ್ ೨೯ರ ವರೆಗೆ ಹೋಂ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿತ್ತು. ಆದರೆ ಡಾ. ಚಿನ್ಮಯಿ ಅವರನ್ನು ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ಎಸ್.ಆರ್. ಕಬಾಡೆ ಮತ್ತು ಅನುಪಮಾ ಪುತ್ರ ಪ್ರೀತಂ ಕಬಾಡೆ ಯವರು ಡಾ. ಚಿನ್ಮಯಿ ಅವರು ಜರ್ಮನಿ ದೇಶದಿಂದ ಬಂದಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಮನೆಯಲ್ಲಿಯೇ ಇಟ್ಟುಕೊಂಡಿದ್ರು.

ಎಸ್.ಆರ್. ಕಬಾಡೆ ಮತ್ತು ಅನುಪಮಾ ಹಾಗೂ ಪ್ರೀತಂ ಕಬಾಡೆಯವರು ೧೪ ದಿನಗಳ ಕಾಲ ಹೋಂ ಕ್ವಾರೆಂಟೈನ್ ನಲ್ಲಿ ವಾಸವಾಗದೇ ವೈ.ಟಿ.ಪಿ.ಎಸ್. ಮತ್ತು ಆರ್.ಟಿ.ಪಿ.ಎಸ್. ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಅಲ್ಲದೇ ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ, ಬಸ್‌ನಿಲ್ದಾಣ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಯಾವುದೇ ಮುಂಜಾಗ್ರತೆ ವಹಿಸದೇ ಸಂಚರಿಸಿ ಸಾರ್ವಜನಿಕರಲ್ಲಿ ರೋಗ ಹರಡುವ ಭೀತಿಯನ್ನು ಉಂಟುಮಾಡಿ ನಿರ್ಲಕ್ಷ ತೋರಿದ್ದಾರೆ. ಕೋವಿಡ್-೧೯ ಸ್ಪೇಷಲ್ ಎಕ್ಸ್ಕ್ಯೂಟಿವ್ ಅಧಿಕಾರಿ ಅನಿಲ್ ಕುಮಾರ್ ಗೋಖಲೆ ಅವರು ಶಕ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

 ಜವಾಬ್ದಾರಿಯಿತ ಸರ್ಕಾರಿ ಹುದ್ದೆಯಲ್ಲಿದ್ದು, ಕೊರೋನಾ ರೋಗ ಹರಡದಂತೆ ದೇಶದ್ಯಾಂತ ಲಾಕ್‌ಡೌನ್ ಜಾರಿಯಲ್ಲಿದ್ದರೂ ಸಹ ಸಾಂಕ್ರಾಮಿಕ ರೋಗದ ಬಗ್ಗೆ ಅರಿವಿದ್ದರೂ ಸಹ ಜರ್ಮನಿಯಿಂದ ಬಂದಿರುವ ಡಾ.ಚಿನ್ಮಯಿ ಅವರನ್ನು ಮನೆಯಲ್ಲಿಯೇ ಇಟ್ಟುಕೊಂಡು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಮಾಹಿತಿ ನೀಡುವಲ್ಲಿ ನಿರ್ಲಕ್ಷ  ತೋರಿದ್ದಾರೆ ಆದ್ದರಿಂದ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.

Previous ಕೊರೋನ ನಿಯಂತ್ರಣದಲ್ಲಿ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ: ಎಸ್.ಆರ್.ಉಮಾಶಂಕರ್.
Next ದಾನಿಗಳು ನೇರವಾಗಿ ಅತ್ಯವಶ್ಯಕ ವಸ್ತುಗಳನ್ನು ಒದಗಿಸುವುದು ನಿರ್ಬಂಧ.

You might also like

0 Comments

No Comments Yet!

You can be first to comment this post!

Leave a Reply