ಹೊಟೆಲ್, ಹಾಸ್ಟೇಲ್ಗಳಲ್ಲಿ 3 ಸಾವಿರ ಜನರಿಗೆ ಸರ್ಕಾರಿ ಕ್ವಾರಂಟೈನ್ ..?

ಹೊಟೆಲ್, ಹಾಸ್ಟೇಲ್ಗಳಲ್ಲಿ 3 ಸಾವಿರ ಜನರಿಗೆ ಸರ್ಕಾರಿ ಕ್ವಾರಂಟೈನ್ ..?

ಧಾರವಾಡ ಮಾ.31:

 ಕೊರೊನಾ ವೈರಾಣು ನಿಯಂತ್ರಣಕ್ಕೆ ಅನುಸರಿಸುತ್ತಿರುವ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರು ಹಾಗೂ ರೋಗ ಲಕ್ಷಣಗಳಿರುವವರನ್ನು ಈಗ ಅವರ ಮನೆಗಳಲ್ಲಿಯೇ ಪ್ರತ್ಯೆಕವಾಗಿರಿಸಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಆದರೂ ಅವರಲ್ಲಿ ಕೆಲವರು ನಿಯಮ ಪಾಲಿಸದೇ ಹೊರಗಡೆ ತಿರುಗಾಡುತ್ತಿದ್ದಾರೆ ಎಂಬ ದೂರಗಳು ಅಲ್ಲಲ್ಲಿ ಕೇಳಿ ಬರುತ್ತಿರುವದರಿಂದ  ನಿರ್ದಿಷ್ಟ ಹೋಟೆಲು, ಹಾಸ್ಟೇಲು, ತರಬೇತಿ ಸಂಸ್ಥೆಗಳಲ್ಲಿ ಸರ್ಕಾರದ ಕಣ್ಗಾವಲಿನಲ್ಲಿಯೇ ಕ್ವಾರೆಂಟೈನ್ ಮಾಡಲು ಅವಳಿ ನಗರದಲ್ಲಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳನ್ನು ಗುರುತಿಸಲಾಗುತ್ತಿದೆ. ಕ್ವಾರೆಂಟೈನ್ ಅವಧಿಯಲ್ಲಿ ಚಿಕಿತ್ಸೆಗೆ ಸಹಾಯ ಮಾಡುವ ಸ್ಟಾಫ್ ನರ್ಸ್‍ಗಳು, ಪ್ರಯೋಗಾಲಯ ಸಹಾಯಕರು  ,ಡಿ ಗ್ರೂಪ್ ನೌಕರರಿಗೆ ಹಾಗೂ ಹೋಟೆಲುಗಳ ಮಾಲಿಕರು, ವ್ಯವಸ್ಥಾಪಕರು,ಅಡುಗೆಯವರು ಹಾಗೂ ರೂಮ್ ಬಾಯ್‍ಗಳಿಗೆ ಸೂಕ್ತ ತರಬೇತಿ ಏರ್ಪಡಿಸಲು ಜಿಲ್ಲಾಡಳಿತ ತ್ವರಿತ ಕ್ರಮಗಳನ್ನು ಕೈಗೊಳ್ಳುತಿದೆ.

 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಈ ಕುರಿತು ಆರೋಗ್ಯ ಕಾರ್ಯ ಪಡೆಯ ಸಭೆ ನಡೆಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು, ಅವಳಿ ನಗರದ ಪ್ರಮುಖ ಹೋಟೆಲುಗಳು,ಸರ್ಕಾರಿ ಮತ್ತು ಖಾಸಗಿ ಹಾಸ್ಟೇಲುಗಳನ್ನ ಗುರುತಿಸಿ ಅವುಗಳ ಅಧಿಕಾರಿಗಳು, ಮಾಲಕರು, ಸಿಬ್ಬಂದಿಯ ಎಲ್ಲ ವಿವರಗಳನ್ನು ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶೌಚಾಲಯ,ಸ್ನಾನದ ಕೋಣೆ ಹೊಂದಿಕೊಡಿರುವ ಕೊಠಡಿಗಳು ಅಥವಾ ಎಲ್ಲ ರೋಗಿಗಳಿಗೂ ಪ್ರತ್ಯೇಕವಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಿರುವ ಕಟ್ಟಡಗಳ ಪಟ್ಟಿ ಮಾಡಬೇಕು.ಸ್ಟಾಫ್ ನರ್ಸ್‍ಗಳು,ಪ್ರಯೋಗಾಲಯ ಸಹಾಯಕರು,ಗ್ರೂಪ್ ‘ಡಿ’ ನೌಕರರು, ಆಂಬುಲೆನ್ಸ್ ಚಾಲಕರಿಗೆ ವೃತ್ತಿಪರ ನಿರ್ವಹಣಾ ತರಬೇತಿ ಹಾಗೂ ಹೋಟೇಲ್‍ಗಳ ಮಾಲಿಕರು,ವ್ಯವಸ್ಥಾಪಕರು, ಅಡುಗೆಯವರು,ಭದ್ರತಾ ಸಿಬ್ಬಂದಿ,ರೂಮ್ ಬಾಯ್‍ಗಳಿಗೆ ಕ್ವಾರೆಂಟೈನ್ ನಿಯಮಗಳ ತರಬೇತಿ ನೀಡಲು ಸಾಮಗ್ರಿ ಸಿದ್ಧಪಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Previous ಮಸೀದಿಗಳಲ್ಲಿ ಆಡಿಯೋ ಕ್ಲಿಪ್ ಧ್ವನಿ ವರ್ಧಕ ಮೂಲಕ ಕೋವಿಡ್-19 ಜಾಗೃತಿ.
Next ಕೊರೋನಾದಿಂದ ಮೃತರಾದ ಕಲಬುರಗಿ ವಯೋವೃದ್ಧನ ಮಗಳು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ.

You might also like

0 Comments

No Comments Yet!

You can be first to comment this post!

Leave a Reply