ಏಪ್ರಿಲ್ನಲ್ಲಿ ಎರಡು ತಿಂಗಳ ಪಡಿತರ ವಿತರಣೆ.

ಏಪ್ರಿಲ್ನಲ್ಲಿ ಎರಡು ತಿಂಗಳ ಪಡಿತರ ವಿತರಣೆ.

ಚಿಕ್ಕಮಗಳೂರು, ಮಾ.೩೦

ಕೋವಿಡ್-೧೯ ವೈರಸ್ ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು ಪಡಿತರ ಚೀಟಿದಾರರಿಗೆ ತೊಂದರೆಯಾಗದಂತೆ ಏಪ್ರಿಲ್ ಮತ್ತು ಮೇ ತಿಂಗಳಿನ ಪಡಿತರವನ್ನು ಏಪ್ರಿಲ್ ತಿಂಗಳಿನಲ್ಲಿ ವಿತರಿಸಲು ಸರ್ಕಾರ ಆದೇಶಿಸಿದೆ.

ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಪ್ರತಿ ಸದಸ್ಯನಿಗೆ ೫ ಕೆ.ಜಿ ಅಕ್ಕಿ ಹಾಗೂ ಒಂದು ಕಾರ್ಡ್‌ಗೆ ೨ ಕೆ.ಜಿ. ಗೋಧಿ ವಿತರಿಸಲಾಗುವುದು. ಅಂತ್ಯೋದಯ ಅನ್ನ ಪಡಿತರ ಚೀಟಿಗಳ ವಿತರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಪ್ರತಿ ಕಾರ್ಡ್‌ಗೆ ೩೫ ಕೆ.ಜಿ ಅಕ್ಕಿ ಈ ಕಾರ್ಡ್ ಹೊಂದಿದವರಿಗೆ ಗೋಧಿ ವಿತರಣೆ ಇರುವುದಿಲ್ಲ. ಎಪಿಎಲ್ ಪಡಿತರ ಚೀಟಿದಾರರಿಗೆ ರೂ.೧೫ ರ ದರದಲ್ಲಿ ಪ್ರತಿ ವ್ಯಕ್ತಿಗೆ ೫ ಕೆ.ಜಿ ಅಕ್ಕಿ, ೨ಕ್ಕಿಂತ ಹೆಚ್ಚು ವ್ಯಕ್ತಿಗಳಿದ್ದಲ್ಲಿ ೧೦ ಕೆಜಿ ಅಕ್ಕಿ ನೀಡಲಾಗುವುದು.

  ಪಡಿತರವನ್ನು ಏಪ್ರಿಲ್ ೧ ರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ ೭.೦೦ ರಿಂದ ರಾತ್ರಿ ೯.೦೦ ಗಂಟೆಯವರೆಗೆ ವಿತರಿಸಲಿದ್ದು, (ಮಧ್ಯಾಹ್ನ ೧.೩೦ ಇಂದ ೨.೩೦ ವರೆಗೆ ವಿರಾಮದ ಸಮಯ) ವಿತರಣೆ ಸಮಯದಲ್ಲಿ ಹೆಚ್ಚಿನ ಜನರು ಸೇರದಂತೆ ದಿನಕ್ಕೆ ನಿಗದಿತ ಟೋಕನ್‌ಗಳನ್ನು ನೀಡಿ ವಿತರಿಸುವುದು ಈ ಸಂದರ್ಭದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ.    ಪಡಿತರ ಚೀಟಿದಾರರ ಆಧಾರ್ ನಂಬರ್‌ನಲ್ಲಿ ನೋಂದಣಿಯಾದ ಮೊಬೈಲ್ ನಂಬರ್‌ಗೆ ಬರುವ ಒಟಿಪಿ ಪಡೆದು ಪಡಿತರ ಪಡೆದುಕೊಳ್ಳಬಹುದು ಒಂದು ವೇಳೆ ಆಧಾರ್‌ಗೆ ನೋಂದಣಿಯಾದ ಮೊಬೈಲ್ ಸಂಖ್ಯೆ ಇಲ್ಲದಿದ್ದಲ್ಲಿ ಪಡಿತರ ಚೀಟಿದಾರರ ಬಳಿ ಇರುವ ಮೊಬೈಲ್ ನಂಬರ್ ನೋಂದಾಯಿಸಿ ಒಟಿಪಿ ನೀಡಿ ಪಡಿತರ ಪಡೆಯಬಹುದಾಗಿದೆ ಮೊಬೈಲ್ ಲಭ್ಯವಿಲ್ಲದ ಅನಿವಾರ್ಯ ಸಂದರ್ಭದಲ್ಲಿ ಬಯೋಮೆಟ್ರಿಕ್ ಮೂಲಕ ಪಡಿತರ ಪಡೆದುಕೊಳ್ಳಬಹುದಾಗಿದ್ದು ಈ ವೇಳೆ ಸ್ಯಾನಿಟೈಸರ್ ಬಳಸಬೇಕು ಹಾಗೂ ಈ ಬಾರಿಯ ಪಡಿತರ ವಿತರಣೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಸಂಬಂಧಿಸಿದ

Previous ಅಂಗಡಿಗಳ ಮುಂದೆ ದರಪಟ್ಟಿ ಫಲಕ ಕಡ್ಡಾಯ.
Next ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಭೆ; ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಸೂಚನೆ.

You might also like

0 Comments

No Comments Yet!

You can be first to comment this post!

Leave a Reply