ಕೋವಿಡ್ ವೈರಸ್ ಹರಡುವಿಕೆ ನಿಯಂತ್ರಣ ಪತ್ತೆ ಮತ್ತು ಚಿಕಿತ್ಸೆಗೆ ಬೇಕಾದ ಅಗತ್ಯ ಉಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಿ : ಶ್ರೀರಾಮುಲು.

ಕೋವಿಡ್ ವೈರಸ್ ಹರಡುವಿಕೆ ನಿಯಂತ್ರಣ ಪತ್ತೆ ಮತ್ತು ಚಿಕಿತ್ಸೆಗೆ ಬೇಕಾದ ಅಗತ್ಯ ಉಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಿ : ಶ್ರೀರಾಮುಲು.

ಕೊಪ್ಪಳ ಮಾ. 31

 ಕೋವಿಡ್-19 ವೈರಸ್ ಹರಡುವಿಕೆ ನಿಯಂತ್ರಣ ಕ್ರಮಗಳಿಗೆ ಬೇಕಾದ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು, ಥರ್ಮಲ್ ಸ್ಕ್ಯಾನಿಂಗ ಉಪಕರಣಗಳನ್ನು ಅಗತ್ಯವಿದ್ದಲ್ಲಿ ಪರವಾನಗಿಯುಳ್ಳ ಪೂರೈಕೆದಾರರಿಂದ ಪಡೆಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕೋವಿಡ್-19 ಸೋಂಕು ತಡೆಗಟ್ಟಲು ಜಿಲ್ಲಾಡಲೀತ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತ ಪರಿಶೀಲನಾ ಸಭೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಕೋವಿಡ್-19 ವೈರಾಣು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಅನುಸರಿಸುತ್ತಿದೆ. ಅದರೊಂದಿಗೆ ಮುಂದಿನ ದಿನಗಳಲ್ಲಿ ಒಂದು ವೇಳೆ ಪಾಸಿಟಿವ್ ಪ್ರಕರಣಗಳು ಪತ್ತೆಯಾದಲ್ಲಿ ಅವುಗಳನ್ನು ನಿರ್ವಹಿಸಲು ಬೇಕಾದ ಎಲ್ಲ ಅಗತ್ಯ ವೈದ್ಯಕೀಯ ಸೌಲಭ್ಯಗಳುಳ್ಳ ಆಸ್ಪತ್ರೆ, ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಉಪಕರಣಗಳು, ವೈದ್ಯರ ತಂಡ ಸೇರಿದಂತೆ ಎಲ್ಲ ಮುಂಜಾಗ್ರತಾ ಕ್ರಮಗಳ ತಯಾರಿಯನ್ನು ಮಾಡಿಕೊಂಡಿದೆ. ಸದ್ಯ ಕೊರತೆ ಇರುವುದು ಥರ್ಮಲ್ ಸ್ಕ್ಯಾನಿಂಗ ಉಪಕರಣಗಳು, ಎನ್-95 ಮಾಸ್ಕ್ಗಳದ್ದು, ಅಗತ್ಯ ಸಂಖ್ಯೆಯ ಮಾಸ್ಕ್ ಹಾಗೂ ಥರ್ಮಲ್ ಸ್ಕ್ಯಾನರ್‌ಗಳನ್ನು ಆರೋಗ್ಯ ಇಲಾಖೆಯಿಂದ ಪೂರೈಸಲು ಪ್ರಯತ್ನಿಸಲಾಗುವುದು. ಮಾಸ್ಕ್ ಹಾಗೂ ಥರ್ಮಲ್ ಸ್ಕ್ಯಾನರ್‌ಗಳ ಬೇಡಿಕೆ ಹೆಚ್ಚಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಅಗತ್ಯವಿದ್ದಲ್ಲಿ ಪರವಾನಗಿ ಹೊಂದಿದ ಖಾಸಗಿ ಪೂರೈಕೆದಾರರಿಂದ ಖರೀದಿಸಿ ಎಂದು ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

Previous ಖಾಸಗಿ ಕ್ಲಿನಿಕ್ ತೆರೆಯದೆ ಇದ್ರೆ ವೈದ್ಯೆರ ಪರವಾನಿಗೆ ರದ್ದು:ಕೃಷಿ ಸಚಿವ ಬಿ.ಸಿ.ಪಾಟೀಲ
Next ಹಸಿದವರಿಗೆ ನೆರವಾಗಲು ‘ಹಸಿದ ಹೊಟ್ಟೆಗೆ ತಣಿವು’ ಕಾರ್ಯಕ್ರಮ ಜಾರಿ.

You might also like

0 Comments

No Comments Yet!

You can be first to comment this post!

Leave a Reply