ಗದಗ ಜಿಲ್ಲೆಯಲ್ಲಿ ಮೊದಲ ಪ್ರಕರಣ.

ಗದಗ ಜಿಲ್ಲೆಯಲ್ಲಿ ಮೊದಲ ಪ್ರಕರಣ.

ಗದಗ-ಏ-7

ಗದಗ ಬೆಟಗೇರಿ ನಗರದ ನಿವಾಸಿ 80ರ ವಯೋವೃದ್ದೆಯನ್ನು ( ಪಿ. 166)   ತೀವ್ರ ಉಸಿರಾಟದ ತೊಂದರೆಯಿಂದಾಗಿ ಜಿಮ್ಸ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಗಂಟಲು ದ್ರವ್ಯವನ್ನು ಲ್ಯಾಬ ಪರೀಕ್ಷೆ ಗೆ ಕಳಿಸಲಾಗಿತ್ತು. ಅವರಿಗೆ ಕೊರೊನಾ ಸೊಂಕು  ಧೃಡಪಟ್ಟಿದ್ದು ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

 ಸೊಂಕಿತ ವೃದ್ಧೆ ಗದಗ ಬೆಟಗೇರಿ ನಗರದ ಎಸ್.ಎಂ.ಕೃಷ್ಣ ನಗರದಲ್ಲಿ ಮನೆಯ ಕಾರ್ಯಕ್ರಮದ ಊಟದಲ್ಲಿ ಭಾಗಿಯಾಗಿದ್ದು ಆ ಕಾರ್ಯಕ್ರಮಕ್ಕೆ ಗೋವಾದಿಂದ ಬಂದವರ ಜೊತೆ ಸಂಪರ್ಕದಿಂದ  ವೃದ್ಧೆಗೆ ಸೊಂಕು ತಗುಲಿರುವ ಸಾಧ್ಯತೆ ಇದೆ ಎಂದಿದ್ದಾರೆ. ಆ ವಯೋವೃದ್ಧೆಯ ಸಂಪರ್ಕದಲ್ಲಿ ಬಂದ  ಒಟ್ಟು 44 ಜನರನ್ನು ಪ್ರತ್ಯೇಕ  ನಿಗಾದಲ್ಲಿ ಇಡಲಾಗಿದೆ ಎಂದು  ಸಚಿವ ಸಿ. ಸಿ. ಪಾಟೀಲ ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರದ ಕೊವಿಡ್-19 ನಿರ್ವಹಣೆ ನಿಯಮಗಳನ್ವಯ ಎಲ್ಲ  ಮುನ್ನೆಚ್ಚರಿಕೆ ಕ್ರಮ ಜರುಗಿಸಿ ನಿಯಂತ್ರಿತ ಪ್ರದೇಶವಾಗಿ ಘೋಷಿಸಿ ಸಾರ್ವಜನಿಕರು ಹೊರಗೆ ಅಥವಾ ಆ ಪ್ರದೇಶದೊಳಗೆ ಹೋಗುವದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು   ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ  ತಿಳಿಸಿದರು.

Previous ಕೊರೊನಾ ವೈರಸ್ ಭಾರತದ ಈ ಪ್ರದೇಶಗಳು ಹೆಚ್ಚು ಅಪಾಯಕಾರಿ.
Next ಪ್ರತಿ ನಿತ್ಯ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಬೇಕರಿ ತೆರೆಯಲು ಅನುಮತಿ.

You might also like

0 Comments

No Comments Yet!

You can be first to comment this post!

Leave a Reply