ಪ್ರಧಾನಮಂತ್ರಿಗಳ ಸಪ್ತ ಸೂತ್ರಗಳನ್ನು ಪಾಲಿಸಿ: ಸಚಿವ ಸಿ.ಟಿ ರವಿ

ಪ್ರಧಾನಮಂತ್ರಿಗಳ ಸಪ್ತ ಸೂತ್ರಗಳನ್ನು ಪಾಲಿಸಿ: ಸಚಿವ ಸಿ.ಟಿ ರವಿ

ಚಿಕ್ಕಮಗಳೂರು ಏ.18

 ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶದ ಪ್ರಧಾನಮಂತ್ರಿಗಳು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನದಂತೆ ದೇಶದ ಜನತೆಗೆ ಸಪ್ತ ಸೂತ್ರಗಳನ್ನು ನೀಡಿದ್ದು ಅವುಗಳನ್ನು ಪಾಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಹೇಳಿದ್ದಾರೆ.

  ನಗರದ ನೇಕಾರರ ಬೀದಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಮನೆ-ಮನೆಗಳಿಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ಜಿಲ್ಲೆಯಲ್ಲಿ ನಗರ ಭಾಗದಲ್ಲಿನ ಜನರ ಮನೆ- ಮನೆಗೆ ಉಚಿತವಾಗಿ ಮಾಸ್ಕ್‌ಗಳನ್ನು ನೀಡುವ ಕೆಲಸವಾಗುತ್ತಿದ್ದು ಇದಕ್ಕಾಗಿ ಸ್ವಯಂ ಸಂಘ- ಸಂಸ್ಥೆಗಳು ಕೂಡ ತಮ್ಮ ಕೈಲಾದ ಸಹಕಾರ ನೀಡುವ ಮೂಲಕ ಹಳ್ಳಿಗಳಲ್ಲೂ ಮಾಸ್ಕ್ ವಿತರಣೆ ಕೆಲಸಕ್ಕೆ ಕೈ ಜೋಡಿಸಬೇಕು ಎಂದರು.

  ಕೊರೋನಾ ಸೋಂಕು ತಡೆಗೆ ಕೇಂದ್ರ ಸರ್ಕಾರವು ಸಪ್ತ ಸೂತ್ರಗಳನ್ನು ಪಾಲನೆ ಮಾಡುವಂತೆ ತಿಳಿಸಿದ್ದು ಅದರಂತೆ ಮನೆಯ ಹಿರಿಯರ ಆರೋಗ್ಯವನ್ನು ಕಾಪಾಡುವುದು, ಎಲ್ಲರೂ ಮಾಸ್ಕ್ ಧರಿಸುವುದು, ವೈಯಕ್ತಿಕ ಸ್ವಚ್ಛತೆಗೆ ಗಮನ ನೀಡುವುದು, ಸೋಂಕು ತಡೆಯಲು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳವುದು ಜೊತೆಗೆ, ನೆರೆಹೊರೆಯ ಬಡ ಕುಟುಂಬಗಳಿಗೆ ತಮ್ಮ ಕೈಲಾದ ನೆರವು ನೀಡುವ ಮೂಲಕ ಸೋಂಕಿನ ತಡೆ ಕುರಿತು ಸರ್ಕಾರ ಕಾಲಕಾಲಕ್ಕೆ ನೀಡುವ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸಿದರು.

  ಕೋವಿಡ್-೧೯ ತಡೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಯೋಜನಾ ಕ್ರಮಗಳು ಹಾಗೂ ಜನರ ಸಹಕಾರದಿಂದಾಗಿ ಜಿಲ್ಲೆಯು ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದು ಇದುವರೆಗೂ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ ಇದನ್ನು ಮುಂದುವರಿಸಲು ಪ್ರತಿಯೊಬ್ಬರು ಕೇಂದ್ರದ ಸಪ್ತ ಸೂತ್ರಗಳನ್ನು ಪಾಲಿಸಿ ಕೊರೋನಾ ಸೋಂಕನ್ನು ದೇಶದಿಂದ ಹೋಗಲಾಡಿಸಲು ಶ್ರಮಿಸಬೇಕು ಎಂದು ಕೇಳಿಕೊಂಡರು.

Previous ಪೌರಕಾರ್ಮಿಕರ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ: ಸಚಿವ ಸಿ.ಟಿ ರವಿ
Next ಬೈಲನರಸಾಪುರ ಗ್ರಾಮಸ್ಥರಿಗೆ ಪ್ರತ್ಯೇಕ ಬ್ಯಾಂಕಿಂಗ್ ವ್ಯವಸ್ಥೆ

You might also like

0 Comments

No Comments Yet!

You can be first to comment this post!

Leave a Reply