ಹುಬ್ಬಳ್ಳಿ ಕಿಮ್ಸ್ ನಿಂದ 24*7 ದೂರವಾಣಿ ವೈದ್ಯರ ಸಲಹಾ ಕೇಂದ್ರ ಸ್ಥಾಪನೆ.

ಹುಬ್ಬಳ್ಳಿ ಕಿಮ್ಸ್ ನಿಂದ 24*7 ದೂರವಾಣಿ ವೈದ್ಯರ ಸಲಹಾ ಕೇಂದ್ರ ಸ್ಥಾಪನೆ.

ಹುಬ್ಬಳ್ಳಿ ಏ.06:

 ದೇಶದಲ್ಲಿ ಸಾರ್ಸ್ ಕೋವಿ-2 ವೈರಸ್ ಹರಡದಂತೆ ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದೆ. ಜನರು ಅನಗತ್ಯವಾಗಿ ಮನೆಯಿಂದ ಹೊರಬರದಂತೆ ನಿರ್ಬಂಧಿಸಲಾಗಿದೆ. ವೈದ್ಯರು ಕೊರೋನಾ ಸೇರಿದಂತೆ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಹೊರಾಟ ನಡೆಸುತ್ತಿದ್ದಾರೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಯಾಗುತ್ತಿದೆ. ಇದನ್ನು ದೂರವಾಗಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾಡಳಿತ ಹಾಗೂ ಕಿಮ್ಸ್ ವತಿಯಿಂದ 24*7 ವೈದ್ಯರ ದೂರವಾಣಿ ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

 ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇರುವರು, ನಿಯಮಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ದೂರವಾಣಿ ಸಂಖ್ಯೆಗಳಾದ 0836-2370057, 0836-2373447, 0836-2373641ಕ್ಕೆ ಕರೆ ಮಾಡಿ ವೈದ್ಯರ ಸಲಹೆ ಪಡೆಯಬಹುದು.

 ದಿನದ 24 ಗಂಟೆಯು ದೂರವಾಣಿ ವೈದ್ಯರ ಸಲಹಾ ಕೇಂದ್ರ ಕಾರ್ಯನಿರ್ವಹಿಸುವುದು. 3 ಶಿಫ್ಟ್ ಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುವರು. ಕಿಮ್ಸ್‍ನ ಎಲ್ಲಾ ವಿಭಾಗಗಳ 200 ವೈದ್ಯರು ದೂರವಾಣಿ ಮೂಲಕ ಜನರ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ.

ನಾಗರಿಕರು ಕರೆ ಮಾಡಿದಾಗ ನಿಯಂತ್ರಣ ಕೊಠಡಿಯಲ್ಲಿನ ಸಿಬ್ಬಂದಿ ಕರೆ ಮಾಡಿದವರ ದೂರವಾಣಿ ಸಂಖ್ಯೆ, ವಿವರ, ಆರೋಗ್ಯ ಸಮಸ್ಯೆಯನ್ನು ರಿಜಿಸ್ಟರ್ ನಮೂದು ಮಾಡಿಕೊಳ್ಳುವರು. ನಂತರ ಆರೋಗ್ಯ ಸಮಸ್ಯೆಯ ವಿಧವನ್ನು ಆಧರಿಸಿ ಸಂಬಂಧ ಪಟ್ಟ ವಿಭಾಗದ ವೈದ್ಯರಿಗೆ ಕರೆಯನ್ನು ಸಂಯೋಜನೆಗೊಳಿಸುತ್ತಾರೆ. ವೈದ್ಯರು ನೇರವಾಗಿ ರೋಗಿಯೊಡನೆ ಮಾತನಡಿ ಸಮಸ್ಯೆಯನ್ನು ಆಲಿಸಿ ಪರಿಹಾರ ಸೂಚಿಸುವರು. ತುರ್ತು ಸಂದರ್ಭದಲ್ಲಿ ನಾಗರಿಕರು ಕಿಮ್ಸ್ ಓಪಿಡಿ ಹಾಗೂ ಕ್ಯಾಜುಯಲಿಟಿಗೆ ನೇರವಾಗಿ ಬರುಬಹದು. ದಿನದ 24 ಗಂಟೆಯೂ ಈ ವಿಭಾಗಗಳು ತೆರೆದಿರುತ್ತವೆ.

Previous ಸ್ಥಳೀಯ ಉತ್ಪನ್ನಗಳ ಖರೀದಿಗೆ ಕ್ರಮ : ಸಚಿವ ಬಿ.ಸಿ.ಪಾಟೀಲ.
Next ಕೊರೋನಾ ವೈರಸ್ ವಿರುದ್ಧ ಹೋರಾಡುವುದು ಹೇಗೆ ಇಲ್ಲಿದೆ ಸರಳ ಉಪಾಯ; ಆಯುಷ್ ಇಲಾಖೆ.

You might also like

0 Comments

No Comments Yet!

You can be first to comment this post!

Leave a Reply