ಖಾಸಗಿ ಕ್ಲಿನಿಕ್ ತೆರೆಯದೆ ಇದ್ರೆ ವೈದ್ಯೆರ ಪರವಾನಿಗೆ ರದ್ದು:ಕೃಷಿ ಸಚಿವ ಬಿ.ಸಿ.ಪಾಟೀಲ

ಖಾಸಗಿ ಕ್ಲಿನಿಕ್ ತೆರೆಯದೆ ಇದ್ರೆ ವೈದ್ಯೆರ ಪರವಾನಿಗೆ ರದ್ದು:ಕೃಷಿ ಸಚಿವ ಬಿ.ಸಿ.ಪಾಟೀಲ

ಹಾವೇರಿ: ಮಾ. 30

ಕರೋನಾದಂತಹ ಮಾರಕ ರೋಗ ಹರಡಿಸುವ ಪ್ರಸಕ್ತ ಸಂದರ್ಭದಲ್ಲಿ ಸರ್ಕಾರಿ ವೈದ್ಯರ ಮಾದರಿಯಲ್ಲಿ ಖಾಸಗಿ ವೈದ್ಯರು ಕ್ಲಿನಿಕ್‍ಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆ ನೀಡಬೇಕು ಎಂದು ಕೃಷಿ ಸಚಿವರಾದ ಬಿ.ಸಿ. ಪಾಟೀಲ ಅವರು ಮನವಿ ಮಾಡಿಕೊಂಡಿದ್ದಾರೆ.

  ಹಾವೇರಿ ನಗರಸಭೆ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಕ್ಲಿನಿಕ್‍ಗಳು ಹಾಗೂ ಮೆಡಿಕಲ್ ಶಾಪ್‍ಗಳು ತೆರೆದಿರಬೇಕು. ಒಂದೊಮ್ಮೆ ಖಾಸಗಿ ವೈದ್ಯರು ಕ್ಲಿನಿಕ್‍ಗಳನ್ನು ತೆರೆದು ಸೇವೆಗೆ ಮುಂದಾಗದಿದ್ದರೆ ಅಂತವರ ಮೇಲೆ ಕ್ರಮವಹಿಸಲಾಗುವುದು. ಕ್ಲಿನಿಕ್‍ಗಳಿಗೆ ನೀಡಿದ ಲೈಸನ್ಸ್ ಸಹ ರದ್ದು ಪಡಿಸಲಾಗುವುದು. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.

  ದೇಶದಲ್ಲಿ ಈಗಾಗಲೇ ಕೋವಿಡ್-19 ಸೋಂಕಿನ ಒಂದು ಸಾವಿರ ಪ್ರಕರಣಗಳು ದಾಟಿವೆ. ಅದೃಷ್ಟವಶಾತ ಹಾವೇರಿ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಈಗಾಗಲೇ ವಿದೇಶದಲ್ಲಿರುವ ಜಿಲ್ಲೆಯ ಪ್ರಜೆಗಳು ಬಂದಾಗಿದೆ. ಬೇರೆ ರಾಜ್ಯ ಮತ್ತು ದೇಶದಿಂದ ಬಂದವರನ್ನು ತಪಾಸಣೆಗೆ ಒಳಪಡಿಸಿ ಗೃಹ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. ನಿತ್ಯವೂ ಇವರಮೇಲೆ ವೈದ್ಯಕೀಯ ನಿಗಾವಹಿಸಲಾಗಿದೆ. ಈಗಾಗಲೇ ಜಾರಿಗೊಳಿಸಲಾದ ಕಫ್ರ್ಯೂ ಅವಧಿಯಲ್ಲಿ ಜಿಲ್ಲೆಯ ಜನತೆ ಸಂಯಮದಿಂದ ವರ್ತಿಸಬೇಕು.  ಮನೆಯಿಂದ ಹೊರಬರದೆ ಮನೆಯೊಳಗೆ ಇರಬೇಕು. ಇಡಿ ಜಗತ್ತಿಗೆ ಕಷ್ಟಬಂದಿದೆ. ನಮ್ಮ ದೈನಂದಿನ ಚಟುವಟಿಕೆಗೆ ಕೊಂಚ ಕಷ್ಟವಾಗಿರಬಹುದು. ಆದರೆ ಇದನ್ನು ಸಹಿಸಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳ ಪರಿಸ್ಥಿತಿ ಗಂಭೀರವಾಗಲಿದೆ. ಇದನ್ನು ಅರ್ಥಮಾಡಿಕೊಂಡು ಎಲ್ಲರೂ ಮನೆಯೊಳಗಿರಬೇಕು, ಸಾಮಾಜಿಕ ಅಂತರವೇ ಕರೋನಾ ನಿರ್ಮೂಲನೆಗೆ ಔಷಧವಾಗಿದೆ ಎಲ್ಲರೂ ಸಹಕರಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

Previous ಕೊರೊನಾ ಹೋರಾಟಕ್ಕೆ ಕೈ ಜೋಡಿಸಿ:ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಮನವಿ.
Next ಕೋವಿಡ್ ವೈರಸ್ ಹರಡುವಿಕೆ ನಿಯಂತ್ರಣ ಪತ್ತೆ ಮತ್ತು ಚಿಕಿತ್ಸೆಗೆ ಬೇಕಾದ ಅಗತ್ಯ ಉಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಿ : ಶ್ರೀರಾಮುಲು.

You might also like

0 Comments

No Comments Yet!

You can be first to comment this post!

Leave a Reply