ಸಾರ್ವಜನಿಕರಿಂದ ಸಂಗ್ರಹಿಸಿದ ಆಹಾರ ಧಾನ್ಯಗಳ ವಿತರಣೆ.

ಸಾರ್ವಜನಿಕರಿಂದ ಸಂಗ್ರಹಿಸಿದ ಆಹಾರ ಧಾನ್ಯಗಳ ವಿತರಣೆ.

ಹುಬ್ಬಳ್ಳಿ ಏ.12

ಕೋವಿಡ್ 19 ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರಿಗೆ ಜಿಲ್ಲಾಡಳಿತ ಧಾರವಾಡದ ಅಂಬೇಡ್ಕರ್ ಭವನದಲ್ಲಿ  ಸ್ಥಾಪಿಸಿರುವ ಆಹಾರ ಧಾನ್ಯಗಳ ಸ್ವೀಕೃತಿ ಕೇಂದ್ರದಲ್ಲಿ ಸಂಗ್ರಹವಾಗಿರುವ ಧಾನ್ಯಗಳನ್ನು ಇಂದು ಹುಬ್ಬಳ್ಳಿಯ ಸೆಟ್ಲಮೆಂಟ್ ಪ್ರದೇಶ, ಗೋಪನಕೊಪ್ಪ, ಶಿರಡಿನಗರ,ಕೇಶ್ವಾಪೂರ, ನವಲೂರ ಛಾವಣಿ, ಧಾರವಾಡದ ಹಲವು ಪ್ರದೇಶಗಳಲ್ಲಿನ ಜನರಿಗೆ ವಿತರಿಸಲಾಯಿತು.

ಧಾರವಾಡದ ಸನ್ಮತಿ ಮಾರ್ಗದಲ್ಲಿರುವ ಆಹಾರ ಧಾನ್ಯಗಳ ಸ್ವೀಕೃತಿ ಕೇಂದ್ರದಲ್ಲಿ ಸಂಗ್ರಹವಾಗುತ್ತಿರುವ ಆಹಾರ ಧಾನ್ಯಗಳು ಮತ್ತು ಕಾರ್ಮಿಕರಿಂದ ಸಹಾಯವಾಣಿ ಮೂಲಕ ಬರುವ ಬೇಡಿಕೆಗಳ ಆದ್ಯತಾ ಪಟ್ಟಿ ಮಾಡಿ ವಿತರಣೆಗೆ ಕ್ರಮ ಜರುಗಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್ .ಆರ್.ಪುರುಷೋತ್ತಮ ತಿಳಿಸಿದ್ದಾರೆ.

Previous ಮುಖ್ಯಮಂತ್ರಿಗಳ ದೂರವಾಣಿ ಕರೆಗೆ ಸ್ಪಂದನೆ ಮಹಿಳೆಗೆ ಕ್ಯಾನ್ಸರ್ ಚಿಕಿತ್ಸೆ ಏರ್ಪಾಟು.
Next ಬಸ್ನಲ್ಲಿ ಸೋಂಕಿತ ವ್ಯಕ್ತಿ ಸಂಚಾರ. ಪ್ರಯಾಣಿಕರು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ.

You might also like

0 Comments

No Comments Yet!

You can be first to comment this post!

Leave a Reply