ಕೊರೋನಾದಿಂದ ಮೃತರಾದ ಕಲಬುರಗಿ ವಯೋವೃದ್ಧನ ಮಗಳು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ.

ಕೊರೋನಾದಿಂದ ಮೃತರಾದ ಕಲಬುರಗಿ ವಯೋವೃದ್ಧನ ಮಗಳು ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ.

ಕಲಬುರಗಿ.ಮಾ.31:

ಕೊರೋನಾ ಸೋಂಕಿನಿಂದ‌ ಮೃತರಾದ ಕಲಬುರಗಿಯ 76 ವರ್ಷದ ವಯೋವೃದ್ಧನ ಮಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು,‌ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ  ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

76 ವರ್ಷದ ವಯೋವೃದ್ಧ ಕಳೆದ‌ ಮಾರ್ಚ್ 10 ರಂದು ವಯೋಸಹಜ ಕಾಯಿಲೆಯ ಜೊತೆಗೆ ಕೊರೋನಾ‌ ಸೋಂಕಿನಿಂದ ಮೃತಪಟ್ಟಿದ್ದ. ಇದರಿಂದ ಕಲಬುರಗಿ ರೆಡ್ ಅಲರ್ಟ್ ಆಗಿ ಮಾರ್ಪಟ್ಟಿತ್ತು. ಮೃತನ ನೇರ ಸಂಪರ್ಕದಲ್ಲಿ ಬಂದಿದ್ದ ಆತನ 45 ವರ್ಷದ ಮಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ  ಕೊರೋನಾ ಪಾಸಿಟಿವ್ ದೃಢವಾದ ಹಿನ್ನೆಲೆಯಲ್ಲಿ ಕಲಬುರಗಿ ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಐಸೋಲೇಷನ್ ವಾರ್ಡ್ ನಲ್ಲಿಟ್ಟು ತೀವ್ರ ನಿಗಾದಡಿ ಚಿಕಿತ್ಸೆ ನೀಡಲಾಗಿತ್ತು.

ಚಿಕಿತ್ಸೆಯ 14  ದಿನಗಳ ನಂತರ  ಸದರಿ ಮಹಿಳೆಗೆ ಕೋವಿಡ್-19 ಪರೀಕ್ಷೆ ಮಾಡಿದಾಗ ನೆಗೆಟಿವ್ ಕಂಡುಬಂದಿದೆ. 24 ಗಂಟೆ‌ ನಂತರ‌ ಮತ್ತೊಮ್ಮೆ ಪರೀಕ್ಷಿಸಿದಾಗ ಸಹ ನೆಗೆಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ  ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

Previous ಹೊಟೆಲ್, ಹಾಸ್ಟೇಲ್ಗಳಲ್ಲಿ 3 ಸಾವಿರ ಜನರಿಗೆ ಸರ್ಕಾರಿ ಕ್ವಾರಂಟೈನ್ ..?
Next ಕೊರೊನಾ ಹೋರಾಟಕ್ಕೆ ಕೈ ಜೋಡಿಸಿ:ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಮನವಿ.

You might also like

0 Comments

No Comments Yet!

You can be first to comment this post!

Leave a Reply