ಕೋವಿಡ್-19 ಮುನ್ನೆಚ್ಚರಿಕೆ- ಆರೋಗ್ಯದ ಹಿತದೃಷ್ಟಿಯಿಂದ ಪ್ರಾರ್ಥನಾ ಸ್ಥಳಗಳ ಭೇಟಿಗೆ ನಿರ್ಬಂಧ.

ಕೋವಿಡ್-19 ಮುನ್ನೆಚ್ಚರಿಕೆ- ಆರೋಗ್ಯದ ಹಿತದೃಷ್ಟಿಯಿಂದ ಪ್ರಾರ್ಥನಾ ಸ್ಥಳಗಳ ಭೇಟಿಗೆ ನಿರ್ಬಂಧ.

ವಿಜಯಪುರ ಎ.06:

ಸರ್ಕಾರದ ನಿರ್ದೇಶನದನ್ವಯ ಕೋವಿಡ್-19 ಮುನ್ನೆಚ್ಚರಿಕೆಯಾಗಿ ಇದೇ ಎಪ್ರೀಲ್ 9ರಂದು ಮುಸ್ಲಿಂರಿಗೆ ಅತ್ಯಂತ ಮಹತ್ವದ ದಿನವಾಗಿರುವ ಶಬ್-ಎ-ಬರಾತ್‍ದಂದು ಯಾರೂ ಒಟ್ಟುಗೂಡಿ ಧಾರ್ಮಿಕ ಪ್ರಾರ್ಥನೆ ಅಂಗವಾಗಿ ಮಸೀದಿ, ಮುಸ್ಲಿಂ ಖಬ್ರಸ್ಥಾನ ಹಾಗೂ ದರ್ಗಾಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಆಕ್ವಾಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಇಸ್ಲಾಹುದ್ದೀನ್ ಗದ್ಯಾಳ ಅವರು ಆದೇಶ ಹೊರಡಿಸಿದ್ದಾರೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

  ಕೋವಿಡ್-19  ಅಪಾಯದ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಮುಸ್ಲಿಂ ಖಬ್ರಸ್ಥಾನಗಳಲ್ಲಿ ಮತ್ತು ಖಬ್ರಸ್ಥಾನದ ಮುಖ್ಯದ್ವಾರದ ಹೊರಗಡೆ ಹಾಗೂ ದರ್ಗಾಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಈ ಸಂದರ್ಭದಲ್ಲಿ ಇವೆಲ್ಲವುಗಳನ್ನು ಮುಚ್ಚುವಂತೆ ಅವರು ತಿಳಿಸಿದ್ದು, ಆಯಾ ವ್ಯವಸ್ಥಾಪಕರು ಮೇಲ್ಕಂಡಂತೆ ಸಾಮೂಹಿಕ ಪ್ರಾರ್ಥನೆಗೆ ಮತ್ತು ಸಾರ್ವಜನಿಕರ ಭೇಟಿಗೆ ನಿರ್ಬಂಧಿಸಲು ಅವಶ್ಯಕ ಕ್ರಮಕೈಗೊಳ್ಳಲು ಅವರು ತಿಳಿಸಿದ್ದಾರೆ.

Previous ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಒಟ್ಟು 80 ಜನರ ನಿಗಾ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ.
Next ರಾಜ್ಯದಲ್ಲಿ ಹಕ್ಕಿಜ್ವರ ಕಂಡುಬಂದಿಲ್ಲ.

You might also like

0 Comments

No Comments Yet!

You can be first to comment this post!

Leave a Reply