ಜಿಲ್ಲಾ ಆಸ್ಪತ್ರೆ ಎಸ್ಡಿಎಮ್ ಮತ್ತು ಡಿಮಾನ್ಸ್ ಗಳಲ್ಲಿ ಕೋವಿಡ್-19 ಪ್ರಯೋಗಾಲಯ.

ಜಿಲ್ಲಾ ಆಸ್ಪತ್ರೆ ಎಸ್ಡಿಎಮ್ ಮತ್ತು ಡಿಮಾನ್ಸ್ ಗಳಲ್ಲಿ ಕೋವಿಡ್-19 ಪ್ರಯೋಗಾಲಯ.

ಧಾರವಾಡ ಏ.13

  ಕೇಂದ್ರ ಸರಕಾರ ನೀಡಿರುವ ಹೊಸ ಮಾರ್ಗ ಸೂಚಿಗಳ ಅನ್ವಯ ರಕ್ತ ತಪಾಸಣೆ ಹಾಗೂ ಗಂಟಲು ದ್ರವ ಮಾದರಿಗಳ ಸಂಗ್ರಹಣೆಗೆ ಹೆಚ್ಚುವರಿ ಕೇಂದ್ರಗಳ ಅಗತ್ಯವಿದ್ದು, ಆರಂಭದಲ್ಲಿ ಧಾರವಾಡ ಜಿಲ್ಲಾ ಆಸ್ಪತ್ರೆ, ಎಸ್‍ಡಿಎಮ್ ಆಸ್ಪತ್ರೆ ಹಾಗೂ ಡಿಮಾನ್ಸ್ ಆಸ್ಪತ್ರೆಯಲ್ಲಿ ಮುಂದಿನ ಎರಡು ದಿನಗಳಲ್ಲಿ ಆರಂಭಿಸಲು ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.

ಕೋವಿಡ್-19 ಕೊರೊನಾ ವೈರಸ್ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯಗಳಿಗೆ ಹೊಸ ಮಾರ್ಗ ಸೂಚಿಗಳನ್ನು ಅಳವಡಿಸಿಕೊಳ್ಳಲು ಸೂಚಿಸಿದೆ.

ಆದರಿಂದ ಕಂಟೈನ್‍ಮೆಂಟ್ ವಲಯದಲ್ಲಿ ಪ್ರತಿ ಮನೆ ಸಮೀಕ್ಷೆ ಮಾಡಿ ಅಲ್ಲಿನ ನಿವಾಸಿಗಳ ಆರೋಗ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೊರೊನಾ ಸೋಂಕು ದೃಢಪಟ್ಟಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹಾಗೂ ದ್ವೀತಿಯ ಸಂಪರ್ಕಿತ ವ್ಯಕ್ತಿಗಳ ಗಂಟಲು ದ್ರವ ಪ್ರಯೋಗಾಲಯ ಮಾದರಿಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಅಲ್ಲದೆ ಜಿಲ್ಲೆಯಲ್ಲಿ ಈಗಾಗಲ್ಲೇ ಏಳು ಫೀವರ್ ಕ್ಲಿನಿಕ್ ಗಳನ್ನು ಆರಂಭಿಸಲಾಗಿದ್ದು, ನಾಳೆಯಿಂದ ಹುಬ್ಬಳ್ಳಿ ರೈಲ್ವೆ ಆಸ್ಪತ್ರೆ ಹಾಗೂ ಎಸ್‍ಡಿಎಮ್ ಆಸ್ಪತ್ರೆಗಳಲ್ಲಿ ಹೊಸದಾಗಿ ಎರಡು ಫೀವರ್ ಕ್ಲಿನಿಕ್ ಆರಂಭಿಸಲಾಗುತ್ತದೆ ಎಂದು ಅವರು ಹೇಳಿದರು.

ಪರೀಕ್ಷೆಗೆ ಒಳಪಡುವವರ ಸಂಖ್ಯೆ ಬರುವ ದಿನಗಳಲ್ಲಿ ಹೆಚ್ಚಾಗಲಿದೆ, ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಧಾರವಾಡ ಜಿಲ್ಲಾ ಆಸ್ಪತ್ರೆ, ಎಸ್‍ಡಿಎಮ್ ಹಾಗೂ ಡಿಮಾನ್ಸ್ ಆಸ್ಪತ್ರೆಗಳಲ್ಲಿ ಹೊಸ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯೊಂದಿಗೆ ಸಂಬಂಧಿತ ಆಸ್ಪತೆಗಳ ಮುಖ್ಯಸ್ಥರು ಸಮನ್ವಯ ಸಾಧಿಸಿ, ಶೀಘ್ರದಲ್ಲಿ ಕೇಂದ್ರಗಳನ್ನು ಆರಂಭಿಸಬೇಕೇಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

Previous ಬ್ಯಾಂಕ್ಗಳ ಎ.ಟಿ.ಎಮ್ ಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಕೆ.
Next ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡಿದರೆ ಡ್ರೋನ್ ಮೂಲಕ ಸೆರೆ.

You might also like

0 Comments

No Comments Yet!

You can be first to comment this post!

Leave a Reply