ಮಸೀದಿಗಳಲ್ಲಿ ಆಡಿಯೋ ಕ್ಲಿಪ್ ಧ್ವನಿ ವರ್ಧಕ ಮೂಲಕ ಕೋವಿಡ್-19 ಜಾಗೃತಿ.

ಮಸೀದಿಗಳಲ್ಲಿ ಆಡಿಯೋ ಕ್ಲಿಪ್ ಧ್ವನಿ ವರ್ಧಕ ಮೂಲಕ ಕೋವಿಡ್-19 ಜಾಗೃತಿ.

ಬಾಗಲಕೋಟೆ: ಮಾ.31

ಕರ್ನಾಟಕ ರಾಜ್ಯ ವಕ್ಪ್ ಮಂಡಳಿ ಆದೇಶದ ಪ್ರಕಾರ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮುಂಜಾಗ್ರತೆ ಕುರಿತಂತೆ ನೀಡಲಾದ ಆಡಿಯೋ ಕ್ಲೀಪ್ ಅನ್ನು ಎಲ್ಲಾ ಮಸೀದಿಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಸಾರ್ವಜನಿಕ ಅರಿವು ಮೂಡಿಸಲು 4 ಬಾರಿ ಪ್ರಕಟಿಸಬೇಕೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷಕರು ತಿಳಿಸಿದ್ದಾರೆ. ಅಲ್ಪ ಸಂಖ್ಯಾತರ ಕಲ್ಯಾಣ ಹಜ್ ಹಾಗೂ ವಕ್ಫ್ ಇಲಾಖೆ ವತಿಯಿಂದ ಎಲ್ಲ ಮಸೀದಿಗಳಲ್ಲಿನ ದೈನಂದಿನ ಪ್ರಾರ್ಥನೆಗಳನ್ನು ಏಪ್ರಿಲ್ 14 ರವರೆಗೆ ನಿರ್ಬಂಧಿಸಲು ನಿರ್ದೇಶಿಸಲಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗೃತ ಕ್ರಮ ಈಗಾಗಲೇ ತೆಗೆದುಕೊಳ್ಳಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆದೇಶವನ್ನು ಹೊರಡಿಸಲಾಗಿದೆ. ಮಾರ್ಚ್ 13 ರಿಂದ 15ರವರೆಗೆ ದೆಹಲಿಯ ಮಕರಜ್ ನಿಜಾಮ್ ಉದ್ದಿನ್‍ದಲ್ಲಿ ಧಾರ್ಮಿಕ ಸಭೆ ನಡೆದಿದ್ದು, ಈ ಸಮಾವೇಶದಲ್ಲಿ ಭಾಗಿಯಾದವರು ದೇಶ ವಿದೇಶಗಳಲ್ಲಿ ಸುತ್ತಾಡಿ ಸಭೆ ನಡೆಸಿದ್ದಾರೆ. ಈಗ ಆ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯಿಂದ ಈ ಸಭೆಗೆ ಹಾಜರಿದ್ದ ವ್ಯಕ್ತಿಗಳ ಮಾಹಿತಿ ತಮ್ಮ ಸಮೀಪದ ಪೊಲೀಸ್ ಠಾಣೆ, ತಹಶೀಲ್ದಾರ ಕಚೇರಿಗೆ ಮಾಹಿತಿ ತಲುಪಿಸಲು ಸೂಚಿಸಲಾಗಿದೆ ಎಂದಿದ್ದಾರೆ..

Previous ದಿನಸಿ ಹಾಗೂ ತರಕಾರಿ ಅಂಗಡಿಗಳ ಮಾಹಿತಿಗೊಂದು ಆ್ಯಪ್.
Next ಹೊಟೆಲ್, ಹಾಸ್ಟೇಲ್ಗಳಲ್ಲಿ 3 ಸಾವಿರ ಜನರಿಗೆ ಸರ್ಕಾರಿ ಕ್ವಾರಂಟೈನ್ ..?

You might also like

0 Comments

No Comments Yet!

You can be first to comment this post!

Leave a Reply