ಕೊರೊನಾ ವೈರಸ್ ಕೇಂದ್ರಗಳಲ್ಲಿ ತಜ್ಞರಿಂದ ಕೌನ್ಸಿಲಿಂಗ್.

ಕೊರೊನಾ ವೈರಸ್ ಕೇಂದ್ರಗಳಲ್ಲಿ ತಜ್ಞರಿಂದ ಕೌನ್ಸಿಲಿಂಗ್.

 ಧಾರವಾಡ- ಏ-4

 ಪರಿಹಾರ ಕೇಂದ್ರಗಳಲ್ಲಿ ವಾಸಿಸುತ್ತಿರುವವರು ಕೊರೊನಾ ವೈರಸ್ ಕುರಿತು ಭಯ, ಆತಂಕಕ್ಕೆ ಒಳಗಾಗಬಾರದು ಮತ್ತು ಕುಟುಂಬ ಸದಸ್ಯರಿಂದ ದೂರವಿರುವದರಿಂದಾಗಲಿ ಅಥವಾ ಆರ್ಥಿಕ ಸಮಸ್ಯೆಯಿಂದಾಗಲಿ ಅಥವಾ ಮದ್ಯಪಾನ, ತಂಬಾಕು ಸೇವನೆಯಂತ ದುಶ್ಚಟಗಳಿಗೆ ಅವಕಾಶವಿಲ್ಲದ್ದರಿಂದ ಖಿನ್ನತೆ, ಮಾನಸಿಕ ಸಮಸ್ಯೆಗಳಿಗೆ ಒಳಗಾಗಬಾರದೆಂದು ಜಿಲ್ಲಾಡಳಿತವು ತಜ್ಞ ವೈದ್ಯರಿಂದ ಪರಿಹಾರ ಕೇಂದ್ರದ ವಾಸಿಗಳಿಗೆ ಆಪ್ತಸಮಾಲೋಚನೆ ಶಿಬಿರಗಳನ್ನು ಆರಂಭಿಸಿದೆ.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಮನೋರೋಗ ವಿಭಾಗದ ತಜ್ಞ ವೈದ್ಯರ ಆರು ತಂಡಗಳನ್ನು ಜಿಲ್ಲಾಡಳಿತ ಸಿದ್ಧಗೊಳಿಸಿದೆ. ಪ್ರತಿ ತಂಡದಲ್ಲಿ ಐದು ಜನ ಸದ್ಯಸರಿದ್ದು, ಓರ್ವ ಮನೋರೋಗ ವೈದ್ಯ, ಓರ್ವ ಮನಶಾಸ್ತ್ರಜ್ಞ, ಓರ್ವ ಸೈಕ್ಯಾಟ್ರಿಕ್ ಸೋಶಿಯಲ್ ವರ್ಕರ್, ಓರ್ವ ಸೈಕ್ಯಾಟ್ರಿಕ್ ನರ್ಸ್ ಹಾಗೂ ಮನೋರೋಗ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಇದ್ದಾರೆ.

ಈ ತಂಡಗಳು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಒಂದೊಂದು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಣ್ಣ ಗುಂಪುಗಳನ್ನಾಗಿ ರೂಪಿಸಿ, ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುತ್ತಾರೆ. ಮತ್ತು ಕೊವೀಡ್-19  ಕುರಿತು ಜನರಲ್ಲಿ ಇರುವ ಆತಂಕ, ನಂಬಿಕೆ, ಅಪನಂಬಿಕೆಗಳ ಬಗ್ಗೆ ತಿಳಿಸಿ, ಮುಂಜಾಗ್ರತಾ ಕ್ರಮದ ಬಗ್ಗೆ ತಂಡದ ಸದಸ್ಯರು ಅರಿವು ಮೂಡಿಸುತ್ತಾರೆ.

ಪರಿಹಾರ ಕೇಂದ್ರದಲ್ಲಿರುವವರು ಬಹು ದಿನಗಳಿಂದ ತಮ್ಮ ತಂದೆ, ತಾಯಿ, ಹೆಂಡತಿ, ಗಂಡ, ಮಕ್ಕಳು, ಸೇರಿದಂತೆ ಕುಟುಂಬ ಸದಸ್ಯರಿಂದ ದೂರವಿರುತ್ತಾರೆ ಮತ್ತು ಅನೇಕರು ಮದ್ಯಪಾನ, ತಂಬಾಕು ಸೇವನೆ, ಗುಟಕಾ ಸೇವನೆಯಂತ ದುಶ್ಚಟಗಳ ರೂಢಿ ಹೊಂದಿದ್ದರೆ ಬಹುದಿನಗಳಿಂದ ಇವು ಸಿಗದಿದ್ದಾಗ ವಿಡ್ರಾವಲ್ಸ್ (ದುಶ್ಚಟ ಬಿಟ್ಟಾಗ ಕಾಣುವ ಮಾನಸಿಕ ) ಲಕ್ಷಣಗಳು ಕಾಣಿಸಿ ಖಿನ್ನತೆ, ಮಾನಸಿಕ ರೋಗಗಳಿಗೆ ಮತ್ತು ಆತ್ಮಹತ್ಯೆಯಂತಹ ಅತಿರೇಕಗಳಿಗೂ ತುತ್ತಾಗುವ ಸಾಧ್ಯತೆ ಇರುತ್ತದೆ. ಹಾಗೂ ನಿದ್ರಾಹೀನತೆಯಿಂದ ಬಳಲುತ್ತಿರುತ್ತಾರೆ. ಇಂತಹ ಅಪಾಯ, ಅವಗಡಗಳು ಸಂಭವಿಸದಿರಲೆಂದು ಜಿಲ್ಲಾಡಳಿತವು ಮುಂಜಾಗ್ರತೆಯಾಗಿ ಆಪ್ತಸಮಾಲೋಚನೆ ಶಿಬಿರಗಳನ್ನು ಆರಂಭಿಸಿದೆ.

ತಜ್ಞ ವೈದ್ಯರ ತಂಡವು ಪರಿಹಾರ ಕೇಂದ್ರದ ಪ್ರತಿ ವ್ಯಕ್ತಿಯೊಂದಿಗೆ ಕನಿಷ್ಠ 10 ರಿಂದ 15 ನಿಮಿಷ ಆಪ್ತಸಮಾಲೋಚನೆ ಮಾಡಿ, ನಿರ್ದಿಷ್ಟ ಪ್ರಶ್ನಾವಳಿಗಳನ್ನು ಭರ್ತಿ ಮಾಡಿಕೊಳ್ಳುತ್ತದೆ. ಕೇಂದ್ರಗಳಲ್ಲಿ ವಿಶೇಷ ವರ್ತನೆ, ಪ್ರಭಾವ, ನಡವಳಿಕೆ ಹೊಂದಿರುವ ವ್ಯಕ್ತಿಗಳ ಬಗ್ಗೆ  ನಿಲಯ ಪಾಲಕರಿಂದ ಪ್ರತ್ಯೇಕ ಮಾಹಿತಿ ಪಡೆದು, ವಿಶೇಷ ಸಮಾಲೋಚನೆಗೆ ಅವರನ್ನು ಒಳಪಡಿಸುತ್ತದೆ.

ಸಣ್ಣ ಪ್ರಮಾಣದ ಮಾನಸಿಕ ರೋಗ ಅಥವಾ ಖಿನ್ನತೆ ಕಾಣಿಸಿದರೆ ಸ್ಥಳೀಯ ಆಪ್ತಸಮಾಲೋಚನೆ ಮೂಲಕ ಪರಿಹರಿಸಲಾಗುತ್ತದೆ. ಮದ್ಯಮ ಹಾಗೂ ದೊಡ್ಡ ಪ್ರಮಾಣದಲ್ಲಿದ್ದರೆ ಅಂತವರಿಗೆ ಡಿಮಾನ್ಸ್ ಸಂಸ್ಥೆಯಿಂದ ಉಚಿತವಾಗಿ ಮಾತ್ರೆ, ಔಷಧ ನೀಡಿ ಗುಣಪಡಿಸಲಾಗುತ್ತದೆ.

Previous ಹಸಿದವರಿಗೆ ನೆರವಾಗಲು ‘ಹಸಿದ ಹೊಟ್ಟೆಗೆ ತಣಿವು’ ಕಾರ್ಯಕ್ರಮ ಜಾರಿ.
Next ಸಿದ್ಧಗಂಗಾ ಮಠದಿಂದ ಸಿಎಂ ಪರಿಹಾರ ನಿಧಿಗೆ ೫೦ಲಕ್ಷ ರೂ. ದೇಣಿಗೆ.

You might also like

0 Comments

No Comments Yet!

You can be first to comment this post!

Leave a Reply