ಕೊರೊನಾ ವೈರಸ್ ಭಾರತದ ಈ ಪ್ರದೇಶಗಳು ಹೆಚ್ಚು ಅಪಾಯಕಾರಿ.

ಕೊರೊನಾ ವೈರಸ್ ಭಾರತದ ಈ ಪ್ರದೇಶಗಳು ಹೆಚ್ಚು ಅಪಾಯಕಾರಿ.

ನವದೆಹಲಿ –ಏ-7

ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಪ್ರತಿನಿತ್ಯ ಏರುಮುಖವಾಗುತ್ತಿದ್ದು, ದೇಶದಲ್ಲಿ ಕೆಲವು ಪ್ರದೇಶಗಳನ್ನು ಡೇಂಜರ್ ಝೋನ್ ಎಂದು ಗುರುತಿಸಲಾಗಿದೆ. ಕೇಂದ್ರ ಸರ್ಕಾರ ಒಟ್ಟು ಸೋಂಕಿತ ಪ್ರದೇಶವನ್ನು ಮೂರು ಭಾಗವಾಗಿ ವಿಂಗಡನೆ ಮಡಿದೆ. ರೆಡ್ ಝೋನ್ ಯಲೋ ಝೋನ್ ಹಾಗೂ ಗ್ರೀನ್ ಜೋನ್ ಅಂತಾ ವಿಂಗಡನೆ ಮಾಡಿದೆ. ಅದರಲ್ಲಿ ರೆಡ್ ಝೋನ್ ಅಂದ್ರೆ ಅತೀ ಹೆಚ್ಚು ಭಾದಿತ ಪ್ರದೇಶ, ಯಲೋ ಝೋನ್ ಅದಕ್ಕಿಂತ ಕಡಿಮೆ ಭಾದಿತ ಪ್ರದೇಶ ಹಾಗೂ ಗ್ರೀನ್ ಝೋನ್ ಅಂದ್ರೆ ಅತೀಕಡಿಮೆಸೋಂಕು ಹೊಂದಿರುವ ಪ್ರದೇಶ .ಇದೇ ಕ್ರಮಾಂಕದಲ್ಲಿ 14 ರ ನಂತರ ಲಾಕ್ ಡೌನ್ ಮುಂದುವರೆಸುವ ಚಿಂತನೆಯಲ್ಲಿ ಸರ್ಕಾರ ಇದೆ.  

ವಿಶೇಷವಾಗಿ ಉತ್ತರ ಪ್ರದೇಶದ ಆಗ್ರಾ, ಗೌತಮ್ ಬುದ್ಧ ನಗರ್, ಪತಮ್ ಥಿಟ್ಟ, ಭಿಲ್ವಾರಾ ಮತ್ತು ಪೂರ್ವ ದೆಹಲಿ ಭಾಗದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರು ಇದ್ದಾರೆ ಎಂದು ಪತ್ತೆ ಮಾಡಲಾಗಿದೆ

ನವದೆಹಲಿ, ಏಪ್ರಿಲ್.07: ಕೊರೊನಾ ವೈರಸ್ ಒಂದು ಹಂತದಲ್ಲಿದೆ. ಕೊರೊನಾ ವೈರಸ್ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಭಾರತದಲ್ಲಿ ಕೊರೊನಾ ವೈರಸ್ ಇನ್ನೇನು ಮೂರನೇ ಹಂತಕ್ಕೆ ಕಾಲಿಟ್ಟು ಬಿಡುತ್ತೆ ಎಂದೆಲ್ಲ ಚರ್ಚೆ ನಡೆಸಲಾಗುತ್ತಿದೆ.

ದೇಶವಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿ ಕ್ಷಿಪ್ರಗತಿಯಲ್ಲಿ ಸೋಂಕು ಹರಡುವುದರ ಹಿಂದಿನ ಸೀಕ್ರೆಟ್ ನ್ನು ಐಸಿಎಂಆರ್ ಬಿಚ್ಚಿಟ್ಟಿದೆ. ಒಬ್ಬನೇ ಒಬ್ಬ ಕೊರೊನಾ ವೈರಸ್ ಸೋಂಕಿತನು 30 ದಿನಗಳಲ್ಲಿ ಕನಿಷ್ಛ 406 ಜನರಿಗೆ ಸೋಂಕು ತಗಲಿಸಲು ಸಾಧ್ಯ ಎಂದು ಅಧ್ಯಯನವೊಂದು ತಿಳಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ ವಾಲ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ದೇಶದಲ್ಲಿ ಸೋಂಕು ಹರಡದಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.

Previous ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ.
Next ಗದಗ ಜಿಲ್ಲೆಯಲ್ಲಿ ಮೊದಲ ಪ್ರಕರಣ.

You might also like

0 Comments

No Comments Yet!

You can be first to comment this post!

Leave a Reply