ಬೆಂಗಳೂರು 43 ವರ್ಷದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಸೋಂಕು ದೃಢ.

ಬೆಂಗಳೂರು 43 ವರ್ಷದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಸೋಂಕು ದೃಢ.

ಬೆಂಗಳೂರು ಏ-6

 ನವ ದೆಹಲಿಯಲ್ಲಿ 2020 ರ ಮಾರ್ಚ್ 13 ರಿಂದ 18 ರವರೆಗೆ ನಡೆದ ತಬ್ಲೀಘ್ ಜಮಾತ್  ಧರ್ಮಸಭೆಯಲ್ಲಿ ಭಾಗವಹಿಸಿದ್ದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಬೈಲನರಸಾಪುರ ಗ್ರಾಮದ 43 ವರ್ಷದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಸೋಂಕು ದೃಢ ಪಟ್ಟಿದ್ದು, ಪ್ರಸ್ತುತ ಈ ವ್ಯಕ್ತಿಯು ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಈ ವ್ಯಕ್ತಿಯನ್ನು ಮಾರ್ಚ್ 31 ರಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೋಂ ಕ್ವಾರಂಟೈನ್ ಗೆ ಸೂಚಿಸಲಾಗಿತ್ತು. ನಂತರ ಏಪ್ರಿಲ್ 05 ರಂದು ರಕ್ತ ಪರೀಕ್ಷೆ ಮಾಡಿದಾಗ ಈ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.

Previous ಗೋಲಗುಂಬಜ್ ವ್ಯಾಪ್ತಿಯ ನವಿಲುಗಳಿಗೂ ಆಹಾರ ಧಾನ್ಯ.
Next ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಒಟ್ಟು 80 ಜನರ ನಿಗಾ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ.

You might also like

0 Comments

No Comments Yet!

You can be first to comment this post!

Leave a Reply