ರೋಗಿಗೆ ನೆರವಾಗಿ ಮಾನವೀಯತೆ ಮೆರೆದ ಕಲಬುರಗಿ ಕೊರೋನಾ ವಾರಿಯರ್ಸ್.

ರೋಗಿಗೆ ನೆರವಾಗಿ ಮಾನವೀಯತೆ ಮೆರೆದ ಕಲಬುರಗಿ ಕೊರೋನಾ ವಾರಿಯರ್ಸ್.

ಕಲಬುರಗಿ,ಏ.12.

ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೋವಿದ್ –19 ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸ್ ಮಾನವೀಯತೆ ಮೆರೆದಿದ್ದಾರೆ. ಹೌದು, ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ತುರ್ತಾಗಿ ಬೇಕಾಗಿದ್ದ ಮಾತ್ರೆಗೆ ಸಹಾಯ ಹಸ್ತ ನೀಡಿದ್ದಾರೆ.

ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದ ಶಿವಶರಣ ಎಂಬ ರೋಗಿಗೆ ಪ್ರತಿ ಮಾಹೆ ಸೇವಿಸಬೇಕಾದ ಮಾತ್ರೆಗಳನ್ನು ತಮ್ಮ ಸ್ವಂತ ವಾಹನದಲ್ಲಿ ಕಲಬುರಗಿಯಿಂದ ಹುಮನಾಬಾದ್ ಗೆ ಕೊರೋನಾ ಸೈನಿಕರಾದ ಹರ್ಷಲ್ ಹಾಗೂ ಸಂದೀಪ್ ಹೋಗಿ ತಲುಪಿಸಿದ್ದು, ಇವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಶಿವಶರಣಪ್ಪ ಅವರಿಗೆ 2014 ರಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಮುತ್ರಪಿಂಡ ಬದಲಾವಣೆ ಮಾಡಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದಾಗ್ಯೂ ಕೂಡ ಸದರಿ ವ್ಯಕ್ತಿ ಪ್ರತಿ ಮಾಹೆ ಬೆಂಗಳೂರಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ತೆಗೆದು ಕೊಂಡು ಬರುತ್ತಿದ್ದರು. ಸದ್ಯ ರಾಜ್ಯಾದ್ಯಂತ 21 ದಿನಗಳ ಕಾಲ ಲಾಕ್‍ಡೌನ್ ಇರುವ ಕಾರಣ, ರೈಲು, ಬಸ್ ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಇರದ ಕಾರಣ ಬೆಂಗಳೂರಿಗೆ ಹೊಗದಂತಾಯಿತು. ವಿಕ್ಟೋರಿಯಾ ಆಸ್ಪತ್ರೆಗೆ ಕರೆ ಮಾಡಿ ಈ ಬಾರಿ ತಪಾಸಣೆಗೆ ಬಾರಲು ಆಗದಿರುವ ಬಗ್ಗೆ ತಿಳಿಸಿ ಮಾತ್ರೆಗಳನ್ನು ಕಳುಹಿಸುವಂತೆ ಶಿವಶರಣಪ್ಪ ಕೋರಿದ್ದರು.ಆದರೆ, ಅಲ್ಲಿನ ಸಿಬ್ಬಂದಿಗಳು ಬೆಂಗಳೂರಿನಲ್ಲಿ ಸದ್ಯದಲ್ಲಿ ಟ್ರಾನ್ಸಪೂರ್ಟ್ ಇಲ್ಲ ತಾವೇ ಸ್ವತಃ ಬಂದು ತೆಗೆದುಕೊಂಡು ಹೋಗಲು ತಿಳಿಸಿದ್ದರು, ಆಗ ಶಿವಶರಣಪ್ಪ ಪದೇಪದೆ ಆಸ್ಪತ್ರೆಯವರಲ್ಲಿ ಮನವಿ ಮಾಡಿದಾಗ ಅಲ್ಲಿನ ಸಿಬ್ಬಂದಿ ಜೈ ಲಕ್ಷ್ಮೀ ಟ್ರಾನ್ಸಪೋರ್ಟ್ ಮೂಲಕ ಶಿವಶರಣಪ್ಪ ಅವರ ಮಾತ್ರೆಗಳನ್ನು ಕಳುಹಿಸಿ ಕೊಟ್ಟರು.

ಎರಡು ಮೂರು ದಿನಗಳ ಕಾದರೂ  ಮಾತ್ರೆ ಬೀದರ್ ನ ಹುಮನಾಬಾದ್ ತಲುಪಲಿಲ್ಲ. ಜೈ ಲಕ್ಷ್ಮೀ ಟ್ರಾನ್ಸಪೋರ್ಟ್‍ನವರಿಗೆ ಕರೆ ಮಾಡಿ ಕೇಳಿದಾಗ ಕಲಬುರಗಿವರೆಗೆ ಮಾತ್ರ ವಾಹನಗಳು ಬರಲು ಸಾಧ್ಯ , ಬೀದರವರೆಗೆ ಬರಲು ಸಾಧ್ಯವಿಲ್ಲ ವಾಹನಗಳನ್ನು ಬಿಡುತ್ತಿಲ್ಲ ಎಂದು ತಿಳಿಸಿದರು. ಆಗ ಕಲಬುರಗಿ ಕೊರೋನಾ ಸೈನಿಕರಾದ ಹರ್ಷಲ್ ಮತ್ತು ಸಂದೀಪ ಸದರಿ ಟ್ರಾನ್ಸಪೋರ್ಟ್ ಕಚೇರಿಗೆ ಭೇಟಿ ನೀಡಿ ಮಾತ್ರೆಗಳನ್ನು ಪಡೆದು ತಮ್ಮ ಸ್ವಂತ ವಾಹನದಲ್ಲಿ ಹೋಗಿ ಶಿವಶರಣಪ್ಪ ಅವರ ಮನೆಗೆ ತಲುಪಿಸಿದರು. ಆಗ ಶಿವಶರಣಪ್ಪ ತಮ್ಮ ಮನದಾಳದ ಮಾತನಾಡಿ ಈ ಮಾತ್ರೆ ಇಲ್ಲಿ ತುಂಬಾ ತುಟ್ಟಿ, ಹತ್ತು ಮಾತ್ರೆಗಳಿಗೆ 1500 ರೂ. ಗಳಿತ್ತು.  ಖರೀದಿಸುವದು ತುಂಬಾ ಕಷ್ಟವಾಗಿತ್ತು. ನೀವು ನನಗೆ ಈ ಮಾತ್ರೆ ತಂದು ಕೊಟ್ಟು, ನೆರವಾಗಿದ್ದೀರಿ.ಇದರಿಂದ ನನಗೆ ತುಂಬಾ ಅನುಕೂಲವಾಗಿದೆ ಎಂದು ಕೃತಜ್ಞತಾ ಭಾವ ಮೆರೆದಿದ್ದಾರೆ.

Previous ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದ ಕ್ವಾರೆಂಟೈನ್ ಕೇಂದ್ರದಿಂದ 101 ಜನರ ಬಿಡುಗಡೆ.
Next ಭಾರತ ಕೋವಿಡ್ ಹಾಟ್ಸ್ಪಾಟ್ ಕೇಂದ್ರ ಆಗಬಹುದಿತ್ತು.

You might also like

0 Comments

No Comments Yet!

You can be first to comment this post!

Leave a Reply