ಎಂದೇ ಕುಟುಂಬದ 9 ಜನರಲ್ಲಿ ಕೊರೋನಾ ವೈರಸ್ .ಹೆಚ್ಚಾದ ಜನರಲ್ಲಿ ಆತಂಕ.

ಎಂದೇ ಕುಟುಂಬದ 9 ಜನರಲ್ಲಿ ಕೊರೋನಾ ವೈರಸ್ .ಹೆಚ್ಚಾದ ಜನರಲ್ಲಿ ಆತಂಕ.

ಬಿಹಾರ್- ಏ-9

 ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಕಂಬಂಧಬಾಹುಗಳನ್ನು ವಿಸ್ತರಿಸುತ್ತಿದೆ. ಎಲ್ಲಡ್ಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ವೈರಸ್‌ ಹರಡುವಿಕೆ ತಡೆಯಲು ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮಧ್ಯೆ ಬಿಹಾರದಲ್ಲಿ ಒಂದೇ ಕುಟುಂಬದ ಒಂಬತ್ತು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಅಲ್ಲಿನ ಜನರ ಆತಂಕ ಹೆಚ್ಚಿಸಿದೆ. ಅಲ್ಲದೇ ಮಾರಕ ವೈರಾಣು ರಾಜ್ಯದಲ್ಲಿ ಓರ್ವ ವ್ಯಕ್ತಿಯನ್ನು ಬಲಿ ಪಡೆದಿದೆ. ಬಿಹಾರದಲ್ಲಿ ಈವರೆಗೆ 51 ಕೋವಿಡ್​-19 ಪ್ರಕರಣಗಳು ಕಂಡು ಬಂದಿದ್ದು, ಇಂದು ಹೊಸದಾಗಿ 12 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಸಿವಾನ್​​ದಲ್ಲಿ ಅತೀ ಹೆಚ್ಚು ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಇಲ್ಲಿನ ಜನರು ಹೆಚ್ಚಾಗಿ ಗಲ್ಫ್​ ದೇಶಗಳಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದ ವಾಪಸ್ಸು ಬಂದವರಿಂದ ಸೋಂಕು ಹರಡಿರುವ ಸಾಧ್ಯತೆಯನ್ನು ಆರೋಗ್ಯ ಸಚಿವರ ಕಾರ್ಯದರ್ಶಿ ಸಂಜಯ್​ ಕುಮಾರ್​ ತಿಳಿಸಿದ್ದಾರೆ. ಬಿಹಾರದ ಈವೆರಗೂ  11 ಜಿಲ್ಲೆಗಳಲ್ಲಿ ಕೋವಿಡ್​-19 ಕಾಣಿಸಿಕೊಂಡಿದ್ದು, ಸಿವಾನ್​ದಲ್ಲಿ 20 ಮಂದಿ, ಪಾಟ್ನಾ 5, ಮಂಗೂರ್​​ 7, ನಲಂದಾ 2,ಗಯಾ 5,ಗೋಪಾಲ್​ಗಂಜ್​​​ 3 ಕೇಸ್​ ಕಾಣಿಸಿಕೊಂಡಿವೆ. ಇನ್ನು ಏಪ್ರಿಲ್ 14 ರ ಬಳಿಕ ಈ ರಾಜ್ಯದಲ್ಲಿ ಇನ್ನು 14 ದಿನಗಳ ಕಾಲ್ ಲಾಕ್ ಡೌನ್ ಮಾಡಲು ಸರ್ಕಾರ ಚಿಂತನೆಯಲ್ಲಿ ಇದೆ. 11 ರಂದು ಪ್ರದಾನಿ ಮೋದಿ ಜೊತೆಯಲ್ಲಿ ಚರ್ಚೆ ನೆಡೆಸಿ ಈ ನಿರ್ಧಾರ ಪ್ರಕಟಿಸಲಿದೆ ಅಲ್ಲಿನ ಸರ್ಕಾರ.

Previous ವೈದ್ಯಕೀಯ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಉಭಯ ದೇಶಗಳ ಮನವಿ.
Next ಈ ಕೋವಿಡ್-19 ನಿಂದ ಪಾರಾಗಬಹುದಾಗಿದೆ.

You might also like

0 Comments

No Comments Yet!

You can be first to comment this post!

Leave a Reply